ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್‍ಗೆ ಇಬ್ಬರು ಮಹಿಳೆಯರು ಬಲಿ…

38
firstsuddi

ಬೆಂಗಳೂರು : ಹಿಟ್ ಆ್ಯಂಡ್ ರನ್‍ಗೆ ಇಬ್ಬರು ಮಹಿಳೆಯರು ಬಲಿಯಾಗಿರುವ ಘಟನೆ ನಗರದ ಕೆ.ಆರ್.ಪುರಂ ಬಳಿ ತಡರಾತ್ರಿ ನಡೆದಿದೆ.

ಆಟೋ ಚಾಲಕನ ಪತ್ನಿ ತಾಸೀನಾ(24), ಸೋದರಿ ಫಾಝಿಲಾ(38) ಮೃತ ದುರ್ದೈವಿಗಳು. ಕೆ.ಆರ್ ಪುರಂನಿಂದ ಚನ್ನಸಂದ್ರಕ್ಕೆ ಆಟೋ ಚಾಲಕ ಖಾಲಿದ್, ಪತ್ನಿ ತಾಸೀನಾ, ಸಹೋದರಿ ಫಾಝಿಲಾ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ರು. ಈ ವೇಳೆ ಅತೀ ವೇಗದಿಂದ ಬಂದ ಇನ್ನೋವಾ ಕಾರು ಆಟೋಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ತಾಸೀನಾ, ಫಾಝಿಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಟೋ ಚಾಲಕ ಖಾಲಿದ್, ಇಬ್ಬರು ಮಕ್ಕಳಿಗೆ ಗಾಯಗಳಾಗಿದ್ದು, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅಪಘಾತದ ಬಳಿಕ ಕಾರು ಸಮೇತ ಚಾಲಕ ಪರಾರಿಯಾಗಿದ್ದು ಕೆ.ಆರ್.ಪುರಂ ಠಾಣೆಯಲ್ಲಿ ಹಿಟ್ ಆ್ಯಂಡ್ ರನ್ ಕೇಸ್ ದಾಖಲಾಗಿದೆ.