ಅಕ್ರಮ ಸಂಬಂಧ ನಿರಾಕರಿಸಿದ್ದಕ್ಕೆ ಮಹಿಳೆಗೆ ಚಾಕು ಇರಿತ…

89
firstsuddi

ಬೆಂಗಳೂರು : ಅಕ್ರಮ ಸಂಬಂಧ ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಗೆ ಚಾಕುವಿನಿಂದ ಇರಿದಿರುವ ಘಟನೆ ನಗರದ ಆರ್.ಟಿ ನಗರದಲ್ಲಿ ನಡೆದಿದೆ. ಹಬೀಬಾ ತಾಜ್ (30) ಚಾಕು ಇರಿತಕ್ಕೊಳಗಾದ ಮಹಿಳೆ.

ಹಬೀಬಾ ತಾಜ್ ಗೆ ವಿವಾಹವಾಗಿ 6 ವರ್ಷದ ಹಿಂದೆ ಪತಿ ಸಾವನ್ನಪ್ಪಿದ್ದರು. ಇಬ್ಬರು ಮಕ್ಕಳ ಜೊತೆ ತಾಜ್ ಆರ್.ಟಿ ನಗರದಲ್ಲಿ ವಾಸವಾಗಿದ್ದಳು. ಈ ಮಧ್ಯೆ ಹಬೀಬಾ ಆಟೋ ಚಾಲಕ ಶೇಖ್ ಮೆಹಬೂಬ್ ಜೊತೆ ಸ್ನೇಹ ಬೆಳೆಸಿದ್ದಳು. ಆತನಿಗೂ ಮದುವೆಯಾಗಿ ಮಕ್ಕಳಿದ್ದಾರೆ.

ಆದರೆ ಇತ್ತೀಚೆಗೆ ಹಬೀಬಾ ಬೇರೊಬ್ಬನ ಜೊತೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಳು. ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಕೂಡ ಆಗ್ತಾ ಇತ್ತು. ನಿನ್ನೆ ರಾತ್ರಿ ಕೂಡ ಇಬ್ಬರು ಗಲಾಟೆ ಮಾಡಿದ್ದಾರೆ. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ, ಶೇಖ್ ಮಹಿಳೆಗೆ ಚಾಕುವಿನಿಂದ ಇರಿದಿದ್ದಾನೆ.

ಗಾಯಾಳು ಹಬೀಬಾ ತಾಜ್ ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಬಳಿಕ ಶೇಖ್ ವಿರುದ್ಧ ಮಹಿಳೆ ಕುಟುಂಬಸ್ಥರು ದೂರು ನೀಡಿದ್ದಾರೆ. ಕೊಲೆ ಪ್ರಯತ್ನ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಆರ್.ಟಿ ನಗರದ ಪೊಲೀಸರು ಆರೋಪಿ ಶೇಖ್ ನನ್ನ ಬಂಧಿಸಿದ್ದಾರೆ.