ಏಕಕಾಲದಲ್ಲಿ ಮತ ಚಲಾಯಿಸಿದ ಒಂದೇ ಕುಟುಂಬದ 65 ಮಂದಿ!

65
firstsuddi

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಇಂದು ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಒಂದೇ ಕುಟುಂಬದ 65 ಜನರು ಮತದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ನಗರದ ಬಾದಂ ಕುಟುಂಬದ ಸದಸ್ಯರು ಏಕಕಾಲಕ್ಕೆ ಜ್ಯೂನಿಯರ್ ಕಾಲೇಜು ಆವರಣಕ್ಕೆ ಬಂದು ಮತ ಚಲಾಯಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಬಾದಂ ಕುಟುಂಬಸ್ಥರು, ಪ್ರತಿ ಬಾರಿಯೂ ಕುಟುಂಬಸ್ಥರೆಲ್ಲರೂ ಒಮ್ಮೆಲೆ ಆಗಮಿಸಿ ಮತ ಚಲಾವಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಗೊಂದಲವಿಲ್ಲದೇ ನಡೆಯುತ್ತಿದ್ದು, ಮತಗಟ್ಟೆಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.