ರಾಜ್ಯ ವಿಭಜನೆಯಾದರೆ ಅದಕ್ಕೆ ಮಾಧ್ಯಮಗಳೇ ಹೊಣೆ- ಮುಖ್ಯಮಂತ್ರಿ ಕುಮಾರಸ್ವಾಮಿ …

284
firstsuddi

ಬೆಂಗಳೂರು: ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರ ಕರ್ನಾಟಕದ ವಿವಾದಕ್ಕೆ ಬೆಂಕಿ ಹಚ್ಚುತ್ತಿರುವವರು ಮಾಧ್ಯಮದವರು ಪ್ರತಿಯೊಂದು ವಿಷಯದಲ್ಲಿ ತಪ್ಪೇ ಕಾಣಿಸುತ್ತಾ ಹೋದರೆ, ರಾಜ್ಯ ಉದ್ಧಾರವಾಗಬೇಕೋ ಅಥವಾ ಹಾಳಾಗಬೇಕೋ ಅದು ನಿಮಗೆ ಸೇರಿದ್ದು ಎಂದು ಮಾಧ್ಯಮದವರ ಮೇಲೆ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದು. ನಾನು ಚನ್ನಪಟ್ಟಣದಲ್ಲಿ ಶ್ರೀರಾಮುಲು ವಿಚಾರವಾಗಿ ಮಾತನಾಡಿದ್ದೆ, ಅವರ ಹೇಳಿಕೆಗೆ ಉತ್ತರ ನೀಡಿದ್ದೆನೇ ಹೊರತು ಬೇರೇನೂ ಹೇಳಿಲ್ಲ. ಪ್ರತ್ಯೇಕ ರಾಜ್ಯವಾದರೆ ಅನುದಾನ ಎಲ್ಲಿಂದ ತರುತ್ತೀರಿ? ಎಂದು ಕೇಳಿದ್ದೆ. ಅಖಂಡ ಕರ್ನಾಟಕವಿರಬೇಕೆಂದು ನಾನು ನೂರು ಬಾರಿ ಹೇಳಿದ್ದೇನೆ. ಆದರೆ ಪ್ರತ್ಯೇಕ ಉತ್ತರ ಕರ್ನಾಟಕ ಕೂಗಿಗೆ ಕುಮ್ಮಕ್ಕು ಕೊಟ್ಟವರು ನೀವೇ,  ಒಂದು ವೇಳೆ ರಾಜ್ಯ ವಿಭಜನೆಯಾದರೆ ಅದಕ್ಕೆ ಮಾಧ್ಯಮಗಳೇ ಹೊಣೆ ಎಂದು ಮುಖ್ಯಮಂತ್ರಿ ಮಾಧ್ಯಮದವರ ವಿರುದ್ದ ಆಕ್ರೋಶ ವ್ಯಕ್ತಪಡಿದ್ದಾರೆ.