ಚಾಮರಾಜನಗರದಲ್ಲಿ ಲಘು ವಿಮಾನ ಪತನ – ಪೈಲಟ್‌ಗಳು ಪ್ರಾಣಾಪಾಯದಿಂದ ಪಾರು…

67
firstsuddi

ಚಾಮರಾಜನಗರ: ಲಘು ವಿಮಾನವೊಂದು ಪತನಗೊಂಡಿರುವ ಘಟನೆ ಇಂದು ಜಿಲ್ಲೆಯ ಭೋಗಪುರದ ಬಳಿ ನಡೆದಿದೆ.

ವಿಮಾನ ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ಪೈಲಟ್‌ಗಳು ಪ್ಯಾರಾಚೂಟ್‌ಗಳ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ. ವಿಮಾನ ಸಂಪೂರ್ಣ ಸುಟ್ಟು ಬೆಂಕಿಗೆ ಆಹುತಿಯಾಗಿದೆ. ಸದ್ಯ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿದ್ದು, ವಿಮಾನ ಪತನಕ್ಕೆ ನಿಖರ ಕಾರಣ ಏನೆಂಬುದನ್ನು ತಿಳಿಯಲು ತಪಾಸಣೆ ನಡೆಸುತ್ತಿದ್ದಾರೆ.