ನೆರೆಮನೆಯ ಮಹಿಳೆ ಸ್ನಾನ ಮಾಡುತ್ತಿರುವ ವೇಳೆ ಮೊಬೈಲ್‌ನಲ್ಲಿ ಚಿತ್ರಿಕರಿಸುತ್ತಿದ್ದ ಯುವಕನ ಬಂಧನ…

139
firstsuddi

ದಕ್ಷಿಣ ಕನ್ನಡ: ನೆರೆಮನೆಯ ಮಹಿಳೆ ಸ್ನಾನ ಮಾಡುತ್ತಿರುವ ವೇಳೆ ಮೊಬೈಲ್‌ನಲ್ಲಿ ಚಿತ್ರಿಕರಿಸುತ್ತಿದ್ದ ಯುವಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯ ಪಕ್ಷಿಕೆರೆ ಹೊಸಕಾಡಿನಲ್ಲಿ ನಡೆದಿದೆ.

ಸುಮಂತ್ ಪೂಜಾರಿ (22) ಬಂಧಿತ ಆರೋಪಿಯಾಗಿದ್ದು, ಜಿಲ್ಲೆಯ ಮುಲ್ಕಿ ತಾಲೂಕಿನ ಪಕ್ಷಿಕೆರೆ ಹೊಸಕಾಡು ನಿವಾಸಿಯಾಗಿದ್ದಾನೆ.
ಬುಧವಾರ ರಾತ್ರಿ 11 ಗಂಟೆ ವೇಳೆಯಲ್ಲಿ ಸುಮಂತ್ ಪಕ್ಕದ ಮನೆಯಾಕೆ ಸ್ನಾನ ಮಾಡುವ ಸಮಯ ಕಾದು ವಿಡಿಯೋ ಚಿತ್ರೀಕರಣ ನಡೆಸಿದ್ದ. ಇದನ್ನು ಗಮನಿಸಿದ ಆಕೆ ಕಿರುಚಾಡಿದ್ದಾಳೆ.

ಮಹಿಳೆಯ ಕಿರುಚಾಟಕ್ಕೆ ಮನೆಯವರು, ಸುತ್ತಮುತ್ತಲಿನ ಸ್ಥಳೀಯರು ಬಂದಿದ್ದಾರೆ. ಈ ವೇಳೆ ಸುಮಂತ್ ಚಿತ್ರೀಕರಣ ನಡೆಸುತ್ತಿರುವ ಬಗ್ಗೆ ತಿಳಿದುಬಂದಿದೆ. ಬಳಿಕ ಮಹಿಳೆ ಕುಟುಂಬದವರು ಸುಮಂತ್ ಪೂಜಾರಿಯನ್ನು ಹಿಡಿದು ಥಳಿಸಿದ್ದಾರೆ ಎನ್ನಲಾಗಿದೆ. ಥಳಿಸಿದ ಬಳಿಕ ಮೂಲ್ಕಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಮೊಬೈಲ್ ಸಹಿತ ಸುಮಂತ್ ಪೂಜಾರಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆ ವೇಳೆ, ಬಂಧಿತ ಆರೋಪಿಯ ಮೊಬೈಲ್ ನಲ್ಲಿ ಹಲವಾರು ಅಶ್ಲೀಲ ವೀಡಿಯೊಗಳು ಮತ್ತು ಫೋಟೋಗಳು ಪತ್ತೆಯಾಗಿವೆ.