ಜನ ಪತ್ನಿಯನ್ನು ಕಳ್ಳಿ ಕಳ್ಳಿ ಎಂದು ಕರೆಯುತ್ತಿರುವುದನ್ನು ಸಹಿಸದೇ ಆಕೆಯನ್ನೇ ಹತ್ಯೆಗೈದ ಪತಿ…

60
firstsuddi

ಬೆಂಗಳೂರು: ಜನ ಪತ್ನಿಯನ್ನು ಕಳ್ಳಿ ಕಳ್ಳಿ ಎಂದು ಕರೆಯುತ್ತಿರುವುದನ್ನು ಸಹಿಸದೇ ವ್ಯಕ್ತಿಯೋರ್ವ ತನ್ನ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಸರಿತಾ (35) ಕೊಲೆಯಾದ ಪತ್ನಿ. ಈಕೆಯನ್ನು ಪತಿ ತಾರಾನಾಥ್ ಕೊಲೆ ಮಾಡಿದ್ದಾನೆ. ಈ ದಂಪತಿ ಮೂಲತಃ ಮಂಗಳೂರಿನವರು. ಬೆಂಗಳೂರಿನಲ್ಲಿ ಪಾನೀಪುರಿ ಅಂಗಡಿ ನಡೆಸುತ್ತಿದ್ದರು.

ಪತ್ನಿ ಸರಿತಾ ಮೇಲೆ ಕಳ್ಳತನದ ಆರೋಪ ಕೇಳಿಬಂದಿತ್ತು. ನಂತರ ಬೆಂಗಳೂರಿನ ವೈಟ್ ಫೀಲ್ಡ್ ಗೆ ಶಿಫ್ಟ್ ಆಗಿದ್ರು. ಬಳಿಕ ಕೂಡ ಸಂಬಂಧಿಕರು, ಪರಿಚಿತರು ಸರಿತಾಳನ್ನು ಕಳ್ಳಿ ಕಳ್ಳಿ ಅಂತ ವ್ಯಂಗ್ಯ ಮಾಡುತ್ತಿದ್ದರು. ಇದರಿಂದ ಬೇಸತ್ತ ಪತಿ ತರಾನಾಥ್ ಪತ್ನಿಯ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾನೆ.

ಬಳಿಕ ತಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಆದರೆ, ಧೈರ್ಯ ಸಾಲದೇ ತಾನೇ ಪೊಲೀಸರ ಮುಂದೆ ಶರಣಾಗಿದ್ದಾನೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.