ವೀಲಿಂಗ್ ಮಾಡುತ್ತಿದ್ದಾಗ ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ- ಓರ್ವ ಸಾವು…

99
firstsuddi

ದೇವನಹಳ್ಳಿ: ತಾಲೂಕಿನ ಕಾರಹಳ್ಳಿ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದಾಗ ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಂಗಳೂರು ಮೂಲದ ಆದಿಲ್ ( 25 ) ಮೃತ ಸವಾರ. ಇಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಬೆಂಗಳೂರಿನಿಂದ ಆಗಮಿಸುವ ಕೆಲವರು ಏರ್‌ಪೋರ್ಟ್ ರಸ್ತೆ ಕಡೆ ಬಂದು ವೀಲಿಂಗ್ ಮಾಡುತ್ತಾರೆ. ಹೀಗೆ ದೇವನಹಳ್ಳಿಯಿಂದ ನಂದಿ ಬೆಟ್ಟದ ರಸ್ತೆ ಕಡೆ ಬಂದು ವೀಲಿಂಗ್ ಮಾಡುವ ವೇಳೆ ಎದುರು ಬಂದ ಮತ್ತೊಂದು ಬೈಕ್‍ಗೆ ಡಿಕ್ಕಿ ಹೊಡೆದ ಹಿನ್ನಲೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮತ್ತೋರ್ವ ಯುವಕನಿಗೆ ಗಂಭೀರ ಗಾಯಗಳಾಗಿವೆ.

ಮೃತದೇಹವನ್ನು ದೇವನಹಳ್ಳಿಯ ಸರ್ಕಾರಿ ಆಸ್ವತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.