ಹಟ್ಟಿ ಚಿನ್ನದ ಗಣಿ ಸುತ್ತಮುತ್ತಲಿನ ಪ್ರದೇಶದಲ್ಲಿ 2.7 ತೀವ್ರತೆಯ ಲಘು ಭೂಕಂಪನ…

54
firstsuddi

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಲಘು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆಯ ಕಂಪನ ದಾಖಲಾಗಿದೆ.

ನಿನ್ನೆ ಬೆಳಗ್ಗೆ 2:51 ರ ವೇಳೆ ಭೂಮಿ ಕಂಪಿಸಿದೆ ಎಂದು ರಾಜ್ಯ ವಿಪತ್ತು ಮೇಲ್ವಿಚಾರಣಾ ಕೇಂದ್ರ ದೃಢಪಡಿಸಿದೆ. ಹಟ್ಟಿ, ನಿಲೋಗಲ್, ವೀರಾಪುರ, ಗೆಜ್ಜಲಗಟ್ಟಾ ಗ್ರಾಮ ವ್ಯಾಪ್ತಿಯಲ್ಲಿ ಭೂಕಂಪನವಾಗಿದ್ದು, ಈ ಲಘು ಭೂಕಂಪನದಿಂದ ಸದ್ಯ ಯಾವುದೇ ಅಪಾಯವಾಗಿಲ್ಲ. ಇದರ ಅನುಭವ ಜನರಿಗೂ ಕಂಡುಬಂದಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.

ದೇಶದ ಏಕೈಕ ಜೀವಂತ ಚಿನ್ನದ ಗಣಿ ಹಟ್ಟಿಯಲ್ಲಿ ತುಂಬಾ ಆಳದಲ್ಲಿ ಅಂಡರ್ ಗ್ರೌಂಡ್ ಮೈನಿಂಗ್ ನಡೆಯುತ್ತಿರುವುದರಿಂದ ಈ ಭೂಕಂಪನ ಹಟ್ಟಿ ಹಾಗೂ ಸುತ್ತಮುತ್ತಲ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ.