ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ದರ ಹೆಚ್ಚಳ…

47
firstsuddi

ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್ ಏಪ್ರಿಲ್ 1ರಿಂದ ಹೆಚ್ಚಳವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.

ಏಪ್ರಿಲ್ 1 ರಿಂದ ವಾಹನ ಸವಾರರು ಬೆಂಗಳೂರು-ಮೈಸೂರು ಹೆದ್ದಾರಿ, ಬೆಂಗಳೂರು-ಹೈದರಾಬಾದ್ ಹೆದ್ದಾರಿ ಮತ್ತು ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ನ ಹೊಸಕೋಟೆ-ದೇವನಹಳ್ಳಿ ವಿಭಾಗವನ್ನು ಬಳಸಲು ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಕಣಿಮಿಣಿಕೆ ಮತ್ತು ಶೇಷಗಿರಿ ಟೋಲ್ ಪ್ಲಾಜಾಗಳಲ್ಲಿ ಸಂಗ್ರಹಿಸಲಾದ ಟೋಲ್ ಶುಲ್ಕ ಪರಿಷ್ಕರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ.

ಕಣಿಮಿಣಿಕೆ ಮತ್ತು ಶೇಷಗಿರಿ ಟೋಲ್ ಪ್ಲಾಜಾ
1.ನಾಲ್ಕು ಚಕ್ರವಾಹನ
ಏಕಮುಖ ಪ್ರಯಾಣ – 170 ರೂ.
ದ್ವಿಮುಖ ಪ್ರಯಾಣ – 255 ರೂ.
ತಿಂಗಳ ಪಾಸ್ – 5,715
ಲೋಕಲ್ ತಿಂಗಳ ಪಾಸ್ – 340

2.ಎಲ್‌ಸಿವಿ, ಎಲ್‌ಜಿವಿ/ಮಿನಿಬಸ್
ಏಕಮುಖ ಪ್ರಯಾಣ – 275 ರೂ.
ದ್ವಿಮುಖ ಪ್ರಯಾಣ – 415 ರೂ.
ತಿಂಗಳ ಪಾಸ್ – 9,230 ರೂ.
ಲೋಕಲ್ ತಿಂಗಳ ಪಾಸ್ – 340 ರೂ.

3.ಟ್ರಕ್, ಬಸ್ 2 ಎಕ್ಸೆಲ್
ಏಕಮುಖ ಪ್ರಯಾಣ – 580 ರೂ.
ದ್ವಿಮುಖ ಪ್ರಯಾಣ – 870 ರೂ.
ತಿಂಗಳ ಪಾಸ್ – 19,345 ರೂ.
ಲೋಕಲ್ ತಿಂಗಳ ಪಾಸ್ – 340 ರೂ.

4. 3 ಎಕ್ಸೆಲ್ ವೆಹಿಕಲ್
ಏಕಮುಖ ಪ್ರಯಾಣ – 635 ರೂ.
ದ್ವಿಮುಖ ಪ್ರಯಾಣ – 950 ರೂ.
ತಿಂಗಳ ಪಾಸ್ – 21,100 ರೂ.
ಲೋಕಲ್ ತಿಂಗಳ ಪಾಸ್ – 340 ರೂ.

5. ಮಲ್ಟಿ ಎಕ್ಸೆಲ್ ವೆಹಿಕಲ್, ಹೆವಿ ಕನ್ಸಟ್ರಕ್ಷನ್, ಮಿಷನರಿ ಮೂವಿಂಗ್ ವೆಹಿಕಲ್
ಏಕಮುಖ ಪ್ರಯಾಣ – 910 ರೂ.
ದ್ವಿಮುಖ ಪ್ರಯಾಣ – 1,365 ರೂ.
ತಿಂಗಳ ಪಾಸ್ – 30,335 ರೂ.

6. ಓವರ್ ಸೈಜ್ ವೆಹಿಕಲ್ 7 ಕ್ಕಿಂತ ಹೆಚ್ಚು ಎಕ್ಸೆಲ್ ವೆಹಿಕಲ್
ಏಕಮುಖ ಪ್ರಯಾಣ – 1,110 ರೂ.
ದ್ವಿಮುಖ ಪ್ರಯಾಣ – 1,660 ರೂ.
ತಿಂಗಳ ಪಾಸ್ – 36,930 ರೂ.