ಬಿಯರ್ ತಯಾರಿಕಾ ಘಟಕದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ- 9 ಕೋಟಿ ರೂ. ಮೌಲ್ಯದ ಬಿಯರ್ ಜಪ್ತಿ…

35
firstsuddi

ಹಾಸನ: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಇಲ್ಲಿನ ಬಿಯರ್ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ್ದು, 9 ಕೋಟಿ ರೂ. ಮೌಲ್ಯದ ಬಿಯರ್ ವಶಕ್ಕೆ ಪಡೆದುಕೊಂಡಿದ್ದಾರೆ.

ಹಾಸನ ಹೊರವಲಯದ ಕೌಶಿಕಾ-ಅಂಬುಕಾ ಸಮೀಪದ ಕೈಗಾರಿಕಾ ಪ್ರದೇಶದಲ್ಲಿರುವ ವುಡ್‌ಪೆಕರ್ ಡಿಸ್ಟಿಲರಿಸ್ ಆ್ಯಂಡ್ ಬ್ರಿವರೀಸ್ ಫ್ಯಾಕ್ಟರಿ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ನ್ಯೂನತೆ ಕಂಡುಬಂದ ಪವರ್ ಕೂಲ್, ಲೆಜೆಂಡ್, ಬ್ಲಾಕ್‌ಫೋರ್ಟ್, ವುಡ್‌ಪೆಕರ್ ಬ್ರ್ಯಾಂಡ್‌ ಸೇರಿ ಒಟ್ಟು 56,236 ಬಾಕ್ಸ್‌ಗಳಲ್ಲಿದ್ದ 5,63,756.88 ಲೀಟರ್ ಬಿಯರ್ ಜಪ್ತಿ ಮಾಡಲಾಗಿದೆ. ವುಡ್‌ಪೆಕರ್ ಡಿಸ್ಟಿಲರಿಸ್ ಪರವಾನಗಿದಾರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.