ಮನೆ ಸಮೇತ ಕೊಚ್ಚಿ ಹೋಗಿದ್ದ ತಾಯಿ- ಮಗನ ಮೃತದೇಹ ಇಂದು ಪತ್ತೆ…

472
firstsuddi

ಮಡಿಕೇರಿ :  ಅಗಸ್ಟ್ 16 ರಂದು ಭೀಕರ ಜಲಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದ ತಾಯಿ ಮಗನ ಮೃತದೇಹ ಇಂದು ಪತ್ತೆಯಾಗಿದ್ದು, ಮೃತರು ಚಂದ್ರಾವತಿ (66) ಮತ್ತು ಉಮೇಶ್ (36) ಎನ್ನುವವರಾಗಿದ್ದು, ಮನೆ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸಂಬಂಧಿಕರು ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತ ಪಡಿಸಿ ಶವಗಳನ್ನು ಪತ್ತೆ ಹಚ್ಚಿ ಕೊಡುವಂತೆ ಜಿಲ್ಲಾಡಳಿತದ ಬಳಿ ಮನವಿ ಮಾಡಿದ್ದರು.ಮನವಿ ಹಿನ್ನಲೆಯಲ್ಲಿ ಬುಧವಾರ ಬೆಳಿಗ್ಗೆ ಯೋಧರು ಸ್ಥಳೀಯರೊಂದಿಗೆ ಶೋಧ ನಡೆಸಿದ್ದು, ಕೊನೆಗೂ ತಾಯಿ ಮಗನ ಶವಗಳನ್ನು ಪತ್ತೆ ಹಚ್ಚುವಲ್ಲಿ ಸೇನಾ ಪಡೆಗಳು ಯಶಸ್ವಿಯಾಗಿವೆ.