ಬರೋಬ್ಬರಿ 40 ಕೋಟಿ ರೂ. ಮೌಲ್ಯದ 52 ಕೆಜಿ ಚಿನ್ನ ಪತ್ತೆ.

32

ಭೋಪಾಲ್: ಮಿಂದೋರಿ ಕಾಡಿನಲ್ಲಿ ನಿಂತಿದ್ದ ಕಾಲಿನಲ್ಲಿ 40 ಕೋಟಿ ರೂ. ಮೌಲ್ಯದ 52 ಕೆಜಿ ಚಿನ್ನವನ್ನು ಕಾರ್ಯಾಚರಣೆ ನಡೆಸಿ ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. 30 ವಾಹನಗಳಲ್ಲಿ 100 ಪೆÇಲೀಸರು ಕಾರ್ಯಾಚರಣೆ ತೆರಳಿದ್ದರು. ಜಾರಿ ನಿರ್ದೇಶನಾಲಯ, ಲೋಕಾಯುಕ್ತ ಮತ್ತು ಐಟಿ ಇಲಾಖೆಯಿಂದ ರಿಯಲ್ ಎಸ್ಟೇಟ್ ಉದ್ಯಮಿಗಳ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಇದು ಬೆಳಕಿಗೆ ಕಂಡುಬಂದಿದೆ. ಇಲಾಖೆಗೆ ರಾತ್ರಿ 2 ಗಂಟೆ ಸುಮಾರಿಗೆ ಸುಳಿವು ಸಿಕ್ಕಿತು. ನಾವು ಕರೆ ಸ್ವೀಕರಿಸಿದ ನಂತರ 30 ವಾಹನಗಳಲ್ಲಿ 100 ಪೊಲೀಸರ ತಂಡವು ಸ್ಥಳಕ್ಕೆ ಪರಿಶೀಲನೆ ನಡೆಸಲು ಹೋರಟವು. ಪೊಲೀಸರು ಬಂಧಿಸಲು ಯತ್ನಿಸುತ್ತಿರುವ ಬಿಲ್ಡರ್ ಹೆಸರಿನಲ್ಲಿ ಕಾರನ್ನು ನೋಂದಾಯಿಸಲಾಗಿದೆ ಎಂದು ಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭೋಪಾಲ್ ಮತ್ತು ಇಂದೋರ್‍ನಲ್ಲಿರುವ ತ್ರಿಶೂಲ್ ಕನ್‍ಸ್ಟ್ರಕ್ಷನ್, ಕ್ವಾಲಿಟಿ ಗ್ರೂಪ್ ಮತ್ತು ಇಶಾನ್ ಗ್ರೂಪ್‍ಗೆ ಸೇರಿದ 51 ಸ್ಥಳಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಾದೇಶಿಕ ಸಾರಿಗೆ ಕಚೇರಿಯ ಮಾಜಿ ಕಾನ್‍ಸ್ಟೆಬಲ್ ಸೌರಭ್ ಶರ್ಮಾ ಅವರ ನಿವಾಸದ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು 1 ಕೋಟಿ ಮತ್ತು 40 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.