ದೆಹಲಿಯ ಆಡಳಿತಾ ರೂಢ ಆಮ್ ಆದ್ಮಿ ಪಕ್ಷವು ಇಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಾಗಿದೆ. ಕಾಂಗ್ರೆಸ್ ತನ್ನ ದೆಹಲಿ ನಾಯಕ ವಿಜಯ್ ಮಾಕನ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಅನ್ನು ಹೊರಹಾಕಲು ಇಂಡಿ ಮೈತ್ರಿಕೂಟದ ಇತರೆ ಪಕ್ಷಗಳನ್ನು ಒತ್ತಾಯಿಸಲಾಗಿದೆ ಎಂದು ಎಎಪಿ ತಿಳಿಸಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗೆ ಬೆಂಬಲ ನೀಡುತ್ತಿದೆ ಎಂದು ಎಎಪಿ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಆರೋಪ ಮಾಡಿದ್ದಾರೆ. ಅಜಯ್ ಮಾಕನ್ ಅವರು ಬಿಜೆಪಿಯವರ ಸೂಚನೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. 2024ರ ಲೋಕಸಭಾ ಚುನಾವಣೆಗಾಗಿ ತಯಾರಿಯಾಗಿದ್ದ ಇಂಡಿ ಮೈತ್ರಿಯ ಮೇಲೆ ವಿಭಜನೆಯ ಕಾರ್ಮೋಡ ಕವಿದಂತಾಗಿದೆ. ಒಂದೆಡೆ ಕಾಂಗ್ರೆಸ್ನಿಂದ ನಾಯಕತ್ವವನ್ನು ಕಿತ್ತುಕೊಂಡು ಮಮತಾ ಬ್ಯಾನರ್ಜಿಗೆ ಹಸ್ತಾಂತರಿಸಬೇಕೆಂಬ ಆಗ್ರಹವಿದ್ದರೆ, ಆಮ್ ಆದ್ಮಿ ಪಕ್ಷವು ದೇಶದ ಅತ್ಯಂತ ಹಳೆಯ ಪಕ್ಷವನ್ನು ಈ ಮೈತ್ರಿಕೂಟದಿಂದ ಕಿತ್ತೊಗೆಯುವ ಬೇಡಿಕೆ ಇಟ್ಟಿದೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿರುವ ಎಎಪಿ, ಕಾಂಗ್ರೆಸ್ ನಾಯಕರ ತೀಕ್ಷ್ಣ ಹೇಳಿಕೆಗಳಿಂದ ಕೆರಳಿದ್ದಾರೆ. ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ವಿರುದ್ಧ ಯುವ ಕಾಂಗ್ರೆಸ್ ನೀಡಿದ ದೂರಿನಿಂದ ಕೋಪಗೊಂಡಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಜೊತೆ ಗೆಳತನ ಮಾಡಿಕೊಂಡು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಎಪಿ, ವಿಧಾನಸಭೆ ಚುನಾವಣೆಗೆ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿದ್ದರೂ ಇಂಡಿಯಾ ಮೈತ್ರಿಕೂಟದೊಂದಿಗಿನ ಮೈತ್ರಿ ರಾಷ್ಟ್ರಮಟ್ಟದಲ್ಲಿ ಉಳಿಯಲಿದೆ ಎಂದು ವರದಿಯಾಗಿದೆ.










