ಬೆಂಗಳೂರು: 2025ನೇ ವರ್ಷವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಜನರು ತುದಿಗಾಲಲ್ಲಿ ನಿಂತಿದ್ದಾರೆ. ಹೊಸ ವರ್ಷದ ಆಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಇದಕ್ಕಾಗಿ ರಾಜಧಾನಿಯ ಪ್ರತಿಷ್ಠಿತ ತಾಣಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ. ನಗರದ ಎಂ.ಜಿ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ, ವೈಟ್‍ಫೀಲ್ಡ್, ಮಾರತ್ತಹಳ್ಳಿ ರಸ್ತೆಗಳು, ವಿದ್ಯುತ್‍ಗಳು ಅಲಂಕಾರದಿಂದ ಜಗಮಗಿಸುತ್ತಿವೆ. ಪಬ್, ಹೋಂ ಸ್ಟೇ, ಹೋಟೆಲ್ ಜೊತೆಗೆ ಕಾರ್ಪೊರೇಟ್ ಕಂಪನಿ ಪಾರ್ಟಿಗಳ ಜೊತೆಗೆ ಮನೆಗಳಲ್ಲೂ ಪಾರ್ಟಿಯನ್ನು ಆಯೋಜನೆ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ಗಳಲ್ಲಿ ಕಟ್ಟಡ, ಮರಗಳನ್ನು ವಿದ್ಯುತ್ ದೀಪಗಳಿಂದ ವಿಶೇಷವಾಗಿ ಅಲಂಕೃತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಪಾರ್ಟಿಗಳಿಗೆ ಅನುಕೂಲವಾಗುವಂತ ಸೆಟ್‍ಗಳನ್ನು ಹೋಟೆಲ್‍ಗಳಲ್ಲಿ ಅಳವಡಿಸಲಾಗಿದೆ ಎಂದು ಹೇಳಲಾಗಿದೆ. ಬೃಹತ್ ಸ್ಕ್ರೀನ್‍ಗಳನ್ನು ಅಳವಡಿಸಿ ಪಾರ್ಟಿಯ ಮತ್ತು ಏರಿಸಲು ಬೇಕಾದಂತಹ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಜೊತೆಗೆ ರೆಸ್ಟೋರೆಂಟ್, ಪಬ್‍ಗಳಲ್ಲಿ ಪಾರ್ಟಿ ಆಯೋಜನೆ ಬಗ್ಗೆ ವಿಚಾರಿಸಿ, ಮುಂಚಿತವಾಗಿಯೇ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ.










