ಮೂಡಿಗೆರೆ: ಕೊಟ್ಟಿಗೆಹಾರದಲ್ಲಿ ಪ್ರವಾಸೋಧ್ಯಮ ಇಲಾಖೆಯಿಂದ ನಿರ್ಮಾಣವಾಗುತ್ತಿರುವ ಹೋಟಲ್ ನ ವಾಹನ ನಿಲುಗಡೆಗೆ ಸ್ಥಳಕ್ಕಾಗಿ ಹೋಟೆಲ್ ಸುತ್ತಮುತ್ತಲ್ಲಾ 50ಕ್ಕೂ ಹೆಚ್ಚು ಮರಗಳನ್ನು ತೆರವು ಮಾಡಲಾಗಿದ್ದು ಪರಿಸರಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಟ್ಟಿಗೆಹಾರ ಸಮೀಪ ಪ್ರವಾಸೋದ್ಯಮ ಇಲಾಖೆಯ ಲಕ್ಷಾಂತರ ರೂ ವೆಚ್ಚದಲ್ಲಿ ಹೋಟೆಲ್ ನಿರ್ಮಾಣವಾಗುತ್ತಿದ್ದು ಕಟ್ಟಡದ ಬಹುತೇಕ ಕಾರ್ಯ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಉದ್ಘಾಟನೆಯಾಗಲಿದೆ. ಆದರೆ ಕಟ್ಟಡದ ಸುತ್ತಮುತ್ತಲ್ಲಾ ಮರಗಳನ್ನು ಪಾರ್ಕಿಂಗ್ ಸ್ಥಳದ ನೆಪದಲ್ಲಿ ಬುಡಮೇಲೂ ಮಾಡಲಾಗಿದ್ದು ಹಲವು ವರ್ಷಗಳಿಂದ ದಟ್ಟವಾಗಿ ಬೆಳೆದುನಿಂತಿದ್ದ ಮರಗಳು ಇದಕ್ಕೆ ಬಲಿಯಾಗಿದೆ.
ಈ ಮಾರ್ಗವಾಗಿ ಧರ್ಮಸ್ಥಳ ಹೊರನಾಡು ಸುಬ್ರಮಣ್ಯಗಳಂಥ ಯಾತ್ರಸ್ಥಳಗಳಿಗೆ ಹೋಗುವ ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಹೋಟೆಲ್‍ನ್ನು ನಿರ್ಮಿಸಲಾಗಿದ್ದು ಈ ಹೋಟೆಲ್ ನಿರ್ಮಾಣವಾದರೆ ಪ್ರವಾಸಿಗರಿಗೆ ಅನುಕೂಲವಾಗುವುದು ನಿಜವಾದರೂ ಅದರ ನೆಪದಲ್ಲಿ ಮರಗಳಿಗೆ ಕೊಡಲಿ ಪೆಟ್ಟು ನೀಡಿರುವುದು ಸ್ಥಳೀಯರು ಮತ್ತು ಪರಿಸರಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.










