ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಸಿದು ಬಿದ್ದ ನಟ ಅಂಬರೀಶ್…

1322
firstsuddi

ಬೆಂಗಳೂರು: ಇಂದಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಸಿಸಿ ಸೀಸನ್ 2 ಆರಂಭವಾಗಿದ್ದು, ನಟ ರೆಬೆಲ್ ಸ್ಟಾರ್ ಅಂಬರೀಶ್  ಅವರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದು, ಕ್ರೀಡಾಂಗಣದಲ್ಲಿ ಬೆಳಗ್ಗೆಯಿಂದಲೇ ಅಂಬರೀಶ್ ಅವರು ಓಡಾಡಿಕೊಂಡಿದ್ದರು. ಸಾಕಷ್ಟು ಗಂಟೆಗಳ ಕಾಲ ಕ್ರೀಡಾಂಗಣದಲ್ಲಿ ಕಾಲ ಕಳೆದ ಅವರು ಕೆಲವು ಸಮಯ ಚೇರ್ ನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು.  ಚೇರ್ ನಲ್ಲಿ ಕುಳಿತಿದ್ದ ಅಂಬರೀಶ್ ಅವರು ಎದ್ದು ನಿಲ್ಲಲ್ಲು ಹೋದಾಗ ಕುಸಿದು ಬಿದ್ದಿದ್ದಾರೆ.ತಕ್ಷಣ  ಅವರನ್ನು ರಾಕ್ ಲೈನ್ ವೆಂಕಟೇಶ್ ಅವರು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ