ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಇತ್ತೀಚಿನ ಆಸ್ತಿ ಘೋಷಣೆಯ ಪ್ರಕಾರ ಅವರು 48,944 ರೂಪಾಯಿ ನಗದು ಹಣವನ್ನು ಹೊಂದಿದ್ದು, ಮಾರ್ಚ್ 31, 2018 ರ ವೇಳೆಗೆ ಗಾಂಧಿನಗರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ 11,29,690 ರೂ. ಠೇವಣಿ ಹೊಂದಿದ್ದು, ಮತ್ತೊಂದು ಎಸ್ಬಿಐ ಖಾತೆಯಲ್ಲಿ 1,07,96,288 ರೂ. ಮೊತ್ತದ ಠೇವಣಿ ಹೊಂದಿದ್ದಾರೆ. ಸೌಕರ್ಯದ ಬಾಂಡ್ ಮೇಲೆ 2012ರಲ್ಲಿ ಪ್ರಧಾನಿ 20,000ರೂಗಳ ಹೂಡಿಕೆ ಮಾಡಿದ್ದಾರೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ 5.2 ಲಕ್ಷ ರೂ ಜೀವ ವಿಮಾ ಪಾಲಿಸಿಗಳಲ್ಲಿ 1.6 ಲಕ್ಷ ರೂಗಳನ್ನು ಪ್ರಧಾನಿ ಹೊಂದಿದ್ದಾರೆ. ಅಲ್ಲದೆ ಮೋದಿಯವರ ಬಳಿ 1,38,060 ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ. ಗಾಂಧಿನಗರಲ್ಲಿ 2002ರಲ್ಲಿ 1.3 ಲಕ್ಷ ರೂ ಮೌಲ್ಯದ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ಪ್ರಸ್ತುತ ಇದರ ಮೌಲ್ಯ ಒಂದು ಕೋಟಿ ರೂ. ಎನ್ನಲಾಗಿದೆ.ಮೋದಿ ಅವರ ಬಳಿ ಸ್ವಂತ ಕಾರ್ ಆಗಲಿ ಅಥವಾ ದ್ವಿಚಕ್ರ ವಾಹನವಾಗಲಿ ಇಲ್ಲ. ನರೇಂದ್ರ ಮೋದಿ ಅವರಿಗೆಯಾವುದೇ ತರಹದ ಸಾಲದ ಹೊರೆಗಳಿಲ್ಲ.










