ಬೆಂಗಳೂರು:ಕಾಂಗ್ರೆಸ್ ಕಳೆಯನ್ನು ಬುಡಸಮೇತ ಕಿತ್ತು ಹಾಕಬೇಕೆನ್ನುವ ಸಚಿವ ಎನ್ ಮಹೇಶ್ ಹೇಳಿಕೆಗೆ ಸಚಿವ ಸಿ ಪುಟ್ಟರಂಗ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅವನ್ಯಾರು ನಮ್ಮನ್ನು ಕಿತ್ತು ಹಾಕುವುದಕ್ಕೆ? ನಾವು ಮನಸ್ಸು ಮಾಡಿದರೆ ಅವನೇ ಕಿತ್ತುಹಾಕುವುದು ಕಷ್ಟವ®è. ಅವನು ಒನ್ ಮ್ಯಾನ್ ಆರ್ಮಿ ಎಂದು ತಿಳಿದುಕೊಳ್ಳಬೇಕು .ಜೆಡಿಎಸ್ 36 , ಕಾಂಗ್ರೆಸ್ 80 ಸ್ಥಾನ ಹೊಂದಿದೆ. ಕಾಂಗ್ರೆಸ್ ಮನಸ್ಸು ಮಾಡಿದರೆ ಎನ್.ಮಹೇಶ್ ಹೋಗ್ತಾನೆ. ಈಗ ತಾನೇ ಕಣ್ಣು ಬಿಟ್ಟು ಎಲ್ಲವನ್ನೂ ಮಾಡುತ್ತೇನೆ ಎನ್ನುವುದು ಸರಿಯಲ್ಲ ಕಾಂಗ್ರೆಸ್ ಮನಸ್ಸು ಮಾಡಿದ್ದರಿಂದಲೇ ಮಹೇಶ್ ಸಚಿವರಾಗಿದ್ದಾರೆ ಅದನ್ನು ನೆನಪಿಟ್ಟುಕೊಂಡು ಎಚ್ಚರದಿಂದ ಮಾತನಾಡಲಿ ಎಂದು ಎನ್ ಮಹೇಶ್ ವಿರುದ್ಧ ಸಿ ಪುಟ್ಟರಂಗ ಶೆಟ್ಟಿ ಅವರು ವಾಗ್ದಾಳಿ ನಡೆಸಿದ್ದಾರೆ.










