ಬೆಂಗಳೂರು: ಅಭಿಷೇಕ್ ಅವರು ತಮ್ಮ ತಾಯಿಯೊಂದಿಗೆ ಚುನಾವಣಾ ಪ್ರಚಾರಕ್ಕಾಗಿ ಮಳವಳ್ಳಿಗೆ ಬರುವುದಾಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ಜನರಿಗಾಗಿ ನನ್ನ ಹೆಜ್ಜೆ. ನಾಳೆ ನಾನು ಮಳವಳ್ಳಿಗೆ ಬರುತ್ತಿದ್ದೇನೆ. ನನ್ನ ಅಮ್ಮನೊಂದಿಗೆ ಅದು ಚುನಾವಣಾ ಪ್ರಚಾರಕ್ಕಾಗಿ. ನನ್ನ ಅಪ್ಪ ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದ ಊರು ಮಳವಳ್ಳಿ. ನನ್ನ ತಾತ ಸಾಕಷ್ಟು ವರ್ಷಗಳ ಕಾಲ ಜೀವನ ನಡೆಸಿದ ಮಳವಳ್ಳಿಗೆ ನಾನು ಅಮ್ಮನೊಂದಿಗೆ ಬರುತ್ತಿದ್ದೇನೆ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.