ವಿಜಯಪುರ : ಕ್ರೂಸರ್ ಮತ್ತು ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ 9 ಜನ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿಯ ಚಿಕ್ಕಸಿಂದಗಿಯಲ್ಲಿ ನಡೆದಿದೆ. ಸಾಗರ್ (25), ಚಾಂದಪಾಷಾ (24), ಅಜೀಮ್ (26) ಅಂಬರೀಶ್ (28), ಶಾಕೀರ್ (25), ಶ್ರೀನಾಥ್ (30), ಯುನೂಸ್ (30), ಗುರು(32), ಮಾಂಗಸಾಬ್ (29) ಮೃತ ದುರ್ಧೈವಿಗಳು. ಗೋವಾದಿಂದ ಪ್ರವಾಸ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಮೃತಪಟ್ಟವರೆಲ್ಲರೂ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದವರು ಎನ್ನಲಾಗಿದೆ. ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.