ಮಂಗಳೂರು: ಓಮ್ನಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತುಳು ಚಿತ್ರ ನಿರ್ದೇಶಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆಯ ಶಿರ್ತಾಡಿಯಲ್ಲಿ ನಡೆದಿದೆ. ಹ್ಯಾರಿಸ್ ಹೌದಾಲ್ (30) ಮೃತಪಟ್ಟ ನಿರ್ದೇಶಕ. ಹ್ಯಾರಿಸ್ ಹೌದಾಲ್ ಅವರು ಓಮ್ನಿ ಕಾರಿನಲ್ಲಿ ಕಳೆದ ತಡರಾತ್ರಿ ಮೂಡುಬಿದ್ರೆಯಿಂದ ಶಿರ್ತಾಡಿ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು, ಹ್ಯಾರಿಸ್ ಹೌದಾಲ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹ್ಯಾರಿಸ್ ನಿರ್ದೇಶನದ ‘ಆಟಿಡೊಂಜಿ ದಿನ’ ತುಳು ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು.