ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಜಯ್ ರಾವ್ ಅವರು ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಅಜಯ್ ರಾವ್ ಅವರ ಪತ್ನಿ ಸ್ವಪ್ನ ಅವರು ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಜಯ್ ರಾವ್ ಹಾಗೂ ಸ್ವಪ್ನಾ ದಂಪತಿ 2014ರ ಡಿಸೆಂಬರ್ 18 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರು ಲವ್ ಕಮ್ ಆರೆಂಜ್ ಮ್ಯಾರೇಜ್ ಆಗಿದ್ದರು ಎನ್ನಲಾಗಿದೆ. ಈ ಸಂತೋಷದ ಕ್ಷಣವನ್ನು ಅಜಯ್ ರಾವ್ ಅವರು ಪತ್ನಿ ಹಾಗೂ ಮಗುವಿನೊಂದಿಗೆ ಸೆಲ್ಫಿ ಫೋಟೋ ಸೆರೆ ಹಿಡಿದಿದ್ದಾರೆ. ಈ ಫೋಟೋ ಇದೀಗ ವೈರಲ್ ಆಗಿದೆ










