ದತ್ತಪೀಠ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ, ನಾಗಮೋಹನ್ ದಾಸ್ ವರದಿ ಏಕಪಕ್ಷೀಯವಾಗಿದೆ : ಸಿ.ಟಿ. ರವಿ

883

ಚಿಕ್ಕಮಗಳೂರು : ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರ್ತಾರೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವ್ರು, ಬಿಜೆಪಿಯಿಂದ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಬಹುಜನ ಆಕಾಂಕ್ಷಿಗಳಿರುವ ಕಡೆ ಕೆಲವೊಂದು ಅಸಮಾಧಾನವಿರೋದು ಸಹಜ. ಮುಂದಿನ ದಿನಗಳಲ್ಲಿ ಎಲ್ಲಾ ಅಸಮಾಧಾನ ಸರಿಯಾಗಲಿದೆ ಎಂದ್ರು. ಇದೇ ವೇಳೆ ದತ್ತಪೀಠ ವಿವಾದ ಸಂಬಂಧ ಮಾತನಾಡಿದ ಅವ್ರು, ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸುಪ್ರೀಂಕೋರ್ಟ್ ತೀರ್ಪಲ್ಲ. ಕಾಂಗ್ರೆಸ್ ರಾಜಕೀಯಕ್ಕಾಗಿ ದತ್ತಪೀಠ ವಿವಾದವನ್ನ ಬಳಸಿಕೊಳ್ತಿದೆ ಎಂದು ಆರೋಪಿಸಿದ್ರು. ಕಾಂಗ್ರೆಸ್ ರಾಜಕೀಯಕ್ಕಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನ ಒಪ್ಪಿಕೊಂಡಿದೆ ಎಂದ್ರು. ಈ ವಿವಾದ ಜನತಾ ನ್ಯಾಯಾಲಯದಲ್ಲಿ ಚರ್ಚೆಯಾಗ್ಬೇಕು. ದಾಖಲೆ ಪ್ರಕಾರ ದರ್ಗಾವೇ ಬೇರೆ, ದತ್ತಪೀಠವೇ ಬೇರೆ. ಸರ್ಕಾರಿ ದಾಖಲೆಗಳಲ್ಲೇ ಈ ರೀತಿ ಇದೆ ಎಂದ್ರು. 1947ರ ಗೆಜೆಟ್‍ನಲ್ಲೇ ಈ ಮಾಹಿತಿ ಇದ್ದು, 1964ರಲ್ಲಿ ದತ್ತಪೀಠವನ್ನ ವಕ್ಫ್ ಪ್ರಾಪರ್ಟಿ ಲೀಸ್ಟ್‍ಗೆ ಸೇರಿಸಿದ್ದೇ ಮೊದಲನೇ ಅಪರಾಧ, ಹಿಂದುಗಳ ಮನವಿಯನ್ನ ತಿರಸ್ಕರಿಸಿರಿವುದು ಎರಡನೇ ಅಪರಾಧವಾಗಿದ್ದು ನಾಗಮೋಹನ್ ದಾಸ್ ವರದಿ ಏಕಪಕ್ಷೀಯವಾಗಿದೆ ಎಂದು ಟೀಕಿಸಿದ್ರು. ವಿವಾದವನ್ನ ಜೀವಂತವಾಗಿಟ್ಟು ಮತಬ್ಯಾಂಕ್  ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಷಡ್ಯಂತ್ರ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.