ಸಿ.ಟಿ. ರವಿ ಅವರನ್ನು ಸೋಲಿಸೋದಕ್ಕೆ ಜೆಡಿಎಸ್ ಅಭ್ಯರ್ಥಿ ಹರೀಶ್ ಚಿಕ್ಕಮಗಳೂರಲ್ಲಿ ಬಿರುಸಿನ ಪ್ರಚಾರ

667

ಚಿಕ್ಕಮಗಳೂರು : ಜೆಡಿಎಸ್ ಅಭ್ಯರ್ಥಿ ಬಿ.ಹೆಚ್.ಹರೀಶ್ ಅವರು ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಮಂಗಳವಾರ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳೊಂದಿಗೆ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಪಾದಯಾತ್ರೆ ನಡೆಸಿದ  ಹರೀಶ್ ಅವರು ರಸ್ತೆಯುದ್ದಕ್ಕೂ ಅಂಗಡಿ ಮತ್ತು ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು.

ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆ ತರುವಂತೆ ಅಭಿವೃದ್ದಿಗಾಗಿ ಒಂದು ಬಾರಿ ತಮಗೆ ಮತ ನೀಡುವಂತೆ ಮನವಿ ಮಾಡಿದರು. ನಗರಸಭೆ ಸದಸ್ಯ ದಿನೇಶ್, ಜೆಡಿಎಸ್ ಮುಖಂಡರಾದ ಜಯರಾಜ್ ಅರಸ್, ದೇವರಾಜ್ ಅರಸ್, ಚಿದಾನಂದ್, ಸಿ.ಕೆ.ಮೂರ್ತಿ, ಕೋಟೆ ವಿನಯ್, ಸಿರಾಜ್, ಜಯಂತಿ ಹಾಜರಿದ್ದರು.