ಕಳಸ (ಮೂಡಿಗೆರೆ) : ತೆಂಗಿನ ಮರದ ಸುಳಿಗೆ ಸಿಡಿಲು ಬಡಿದ ಪರಿಣಾಮ ನೋಡ-ನೋಡುತ್ತಿದ್ದಂತೆಯೇ ತೆಂಗಿನ ಮರ ಸುಟ್ಟುಹೋಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸದ ಪಟ್ಟಣದಲ್ಲಿ ನಡೆದಿದೆ. ಮಳೆ ಆರಂಭಕ್ಕೂ ಮುನ್ನ ಕಳಸ, ಹೊರನಾಡು ಸುತ್ತಮುತ್ತ ಬೀಸಿದ ಭಾರೀ ಗಾಳಿ, ಗುಡುಗು-ಸಿಡಿಲಿಗೆ ತೆಂಗಿನ ಮರ ಸುಟ್ಟು ಕರಕಲಾಗಿದೆ. ಮಲೆನಾಡು ಎನ್ನಿಸಿಕೊಂಡಿದ್ರು ಕಾದ ಕಾವಲಿಯಂತಾಗಿದ್ದ ಕಳಸಾದಲ್ಲಿ ಸುಮಾರು ಅರ್ಧ ಗಂಟೆಯ ಕಾಲ ಸುರಿದ ಭಾರಿ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ಹಸಿ ತೆಂಗಿನ ಮರದ ಸುಳಿ ಬೆಂಕಿಯಿಂದ ಸುಟ್ಟು ಹೋಗ್ತಿರೋದನ್ನ ಸ್ಥಳಿಯರೊಬ್ಬರು ಮೊಬೈಲ್‍ನಲ್ಲಿ ಶೂಟ್ ಮಾಡಿದ್ದಾರೆ. ಈ ಘಟನೆಯನ್ನ ಕಣ್ಣಾರೆ ಕಂಡ ಸ್ಥಳಿಯರು ಆತಂಕದ ಜೊತೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.