ಮೂಡಿಗೆರೆ : ಸೂಕ್ತ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಐದು ಲಕ್ಷದ ಐದು ಸಾವಿರ ಹಣವನ್ನ ಮೂಡಿಗೆರೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ಚಾರ್ಮಾಡಿ ಘಾಟ್ ಮೂಲಕ ಮಂಗಳೂರು ಪ್ರವೇಶಿಸುತ್ತಿದ್ದ ಪ್ರಜ್ವಲ್ ದಂಪತಿಗಳ ಕಾರಿನಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಿರಗುಂದ ಬಳಿ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಕಾರನ್ನ ನಿಲ್ಲಿಸಿ ತಪಾಸಣೆ ನಡೆಸಿದಾಗ ಐದು ಲಕ್ಷದ ಐದು ಸಾವಿರ ಹಣ ಪತ್ತೆಯಾಗಿದೆ. ಸರಿಯಾದ ದಾಖಲೆ ತೋರಿಸದ ಹಿನ್ನೆಲೆ ಅಧಿಕಾರಿಗಳು ಹಣವನ್ನ ವಶಕ್ಕೆ ಪಡೆದು, ಸೂಕ್ತ ದಾಖಲೆ ನೀಡಿದ್ದಲ್ಲಿ ಹಣವನ್ನ ವಾಪಸ್ ನೀಡೋದಾಗಿ ಹೇಳಿದ್ದಾರೆ. ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.