ಬೆಂಗಳೂರು: ಹೆಚ್.ಡಿ ದೇವೇಗೌಡರವರ ಕುಟುಂಬದವರು ಇಂದು ಹೊಳೆನರಸೀಪುರದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಟ್ವಿಟ್ ಮಾಡಿದೆ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅಳಲಿಲ್ಲ. ಪುಲ್ವಾಮಾ ದಾಳಿಯಾಗಿ ಯೋಧರು ಮಡಿದಾಗ ಕಣ್ಣೀರು ಬರಲಿಲ್ಲ. ಚುನಾವಣೆ ಬಂದಾಗ ಮಾತ್ರ ಮನೆಮಂದಿಗೆಲ್ಲ ವೇದಿಕೆಯಲ್ಲಿ ಕಣ್ಣೀರು. ರಾಜ್ಯದ ಜನ ಈಗಲೂ ಮರುಳಾಗುವರೇ? ಎಂದು ಬಿಜೆಪಿ ಟ್ವಿಟ್ ಮಾಡಿದೆ.