ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ : ಮೋದಿ ಜನರಿಗೆ ಹೀಗೆ ಅಭಿನಂದನೆ ಸಲ್ಲಿಸಿದ್ದಾರೆ

428

ನವದೆಹಲಿ: ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸರಣಿ ಟ್ವೀಟ್ ಮಾಡಿ ಸಂತಸವನ್ನು ಹಂಚಿಕೊಡಿದ್ದಾರೆ. ಬಿಜೆಪಿಯ ಈ ಭರ್ಜರಿ ಗೆಲುವಿಗೆ ಸಾಥ್ ನೀಡಿದ ಮೇಘಾಲಯಾ, ನಾಗಲ್ಯಾಂಡ್ ಮತ್ತು ತ್ರಿಪುರಾ ರಾಜ್ಯಗಳ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಜನರಿಗೆ ನೀಡರುವ ಭರವಸೆಗಳನ್ನ ನಮ್ಮ ಸರ್ಕಾರ ಈಡೇರಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ.

2018ರ ತ್ರಿಪುರಾ ಚುನಾವಣೆಯು ದೇಶದ ಇತಿಹಾಸದಲ್ಲೇ ಮರೆಯಲಾಗದ ದಿನವಾಗಿದೆ. ತ್ರಿಪುರದ ನನ್ನ ಸಹೋದರ, ಸಹೋದರಿಯರೇ ನೀವು ಮಾಡಿದ ಸಾಧನೆ ಅಸಾಮಾನ್ಯವಾಗಿದೆ. ನೀವು ನೀಡಿರುವ ಬೆಂಬಲಕ್ಕೆ ಧನ್ಯವಾದ ಹೇಳಲು ನನ್ನ ಬಳಿ ಪದಗಳೇ ಸಿಗುತ್ತಿಲ್ಲ. ತ್ರಿಪುರಾವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.ತ್ರಿಪುರ ಚುನಾವಣೆಯ ಗೆಲುವು ಯಾವ ಸಾಮಾನ್ಯ ಚುನಾವಣೆಯ ಗೆಲುವಲ್ಲ. ಈ ಪಯಣವು ಶೂನ್ಯದಿಂದ ಶಿಖರದ ವರೆಗೆ ಬೆಳೆದಿರುವ ಗೆಲುವಾಗಿದೆ. ಇದರಿಂದ ನಮ್ಮ ಸರ್ಕಾರದ ಅಭಿವೃದ್ಧಿ ಮತ್ತು ಬಲವನ್ನ ಹೆಚ್ಚಿಸಿದೆ.

ಇಷ್ಟು ವರ್ಷಗಳ ಕಾಲ ಬಿಜೆಪಿಗೆ ದುಡಿದ ಪ್ರತಿ ಕಾರ್ಯಕರ್ತನಿಗೆ ನಾನು ತಲೆ ಬಾಗಿ ನಮಿಸುತ್ತೇನೆ ಎಂದು ಹೇಳುವ ಮೂಲಕ ವಂದನೆ ಸಲ್ಲಿಸಿದರು. ಅನಾಗರಿಕ ಮತ್ತು ಬೆದರಿಕೆಯ ವಿರುದ್ಧ ಪ್ರಜಾಪ್ರಭುತ್ವತ್ವದ ಗೆಲುವು ಇದಾಗಿದೆ. ಇಂದು ಶಾಂತಿ ಮತ್ತು ಅಹಿಂಸೆ ಎಂಬ ಭಯದಿಂದ ಮುಕ್ತಿ ಸಾಧಿಸಿದೆ. ತ್ರಿಪುರದ ರಾಜ್ಯಕ್ಕೆ ಅರ್ಹವಾದ ಉತ್ತಮ ಸರ್ಕಾರವನ್ನ ನೀಡುತ್ತೀವೆ ಎಂದು ಹೇಳಿದರು. ಭಾರತದ ಜನ ಎನ್‍ಡಿಎ ಸರ್ಕಾರದ ಧನಾತ್ಮಕ ಮತ್ತು ಅಭಿವೃದ್ಧಿ ಆಧಾರಿತ ಕಾರ್ಯಸೂಚಿಯಲ್ಲಿ ನಂಬಿಕೆ ಇಟ್ಟಿದ್ದಾರೆ. ಜನರು ಋಣಾತ್ಮಕ, ವಿಘಟಿತ ರಾಜಕೀಯಕ್ಕೆ ಬೆಲೆ, ಸಮಯ ನೀಡುವುದಿಲ್ಲ ಎನ್ನುವುದು ಈ ಫಲಿತಾಂಶದಿಂದ ತಿಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ.