ನವದೆಹಲಿ:ಬಿಜೆಪಿಯನ್ನು ಅಧಿಕಾರದಿಂದ ಹೊರಗುಳಿಸಲು ನಾವು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಲು ಒಪ್ಪಿದ್ದೇವೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಅವರು ತಿಳಿಸಿದ್ದಾರೆ. ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 114 ಸ್ಥಾನ ಗಳಿಸಿದ್ದು, ಬಹುಮತಕ್ಕೆ 2 ಸ್ಥಾನ ಕಡಿಮೆಯಿದೆ. ಈಗ ಬಿಎಸ್ಪಿ 2 ಸ್ಥಾನಗಳ ಬೆಂಬಲದೊಂದಿಗೆ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 116 ಕಾಂಗ್ರೆಸ್ ಗೆ ದೊರೆತಿದೆ. ಮಧ್ಯಪ್ರದೇಶದಲ್ಲಿ ಸರಕಾರ ರಚಿಸಲು ನಾವು ಬೆಂಬಲ ನೀಡಲು ಒಪ್ಪಿದ್ದೇವೆ, ಅವಶ್ಯಕತೆ ಇದ್ದರೆ ರಾಜಸ್ಥಾನದಲ್ಲೂ ಬೆಂಬಲ ನೀಡುವುದಾಗಿ ಮಾಯಾವತಿ ಅವರು ತಿಳಿಸಿದ್ದಾರೆ.










