ಜೀವದ ಹಂಗು ತೊರೆದು ಹಾವನ್ನು ಮನೆಯಿಂದ ಹೊರಗೆ ಎಳೆದು ತಂದ ಬೆಕ್ಕು…

706

ಕೊಪ್ಪಳ: ಮನೆಯ ಒಳಗೆ ನುಗ್ಗಿದ್ದ ಹಾವನ್ನು ಬೆಕ್ಕು ಕಚ್ಚಿ ಕೊಂದ ಅಪರೂಪದ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ತೊಂಡಿಹಳ್ಳ ದುಂಡಗಿಕ್ಯಾಂಪ್ ನಲ್ಲಿ ನಡೆದಿದ್ದು, ಸೋಮನಾಥ ನಾಯ್ಕ ಅವರ ಮನೆಯ ಒಳಗೆ ಸೇರಿದ್ದ ಹಾವನ್ನು ಮನೆಯವರು ಯಾರು ನೋಡಿರಲಿಲ್ಲ, ಆದರೆ ಅಕಸ್ಮಾತ್ ಆಗಿ ಹಾವು ಬೆಕ್ಕಿನ ಕಣ್ಣಿಗೆ ಬಿದ್ದಿದ್ದು, ಬೆಕ್ಕು ಜೀವದ ಹಂಗು ತೊರೆದು ಹಾವನ್ನು ಮನೆಯಿಂದ ಹೊರಗೆ ಎಳೆದು ತಂದು ಸಾಯುವವರೆಗೂ ಹಾವನ್ನು ಬಿಡದೆ ಕಚ್ಚಿ ಕೊಂದು ಹಾಕಿದ್ದು, ಸ್ಥಳಿಯರು ಅಚ್ಚರಿಗೊಂಡಿದ್ದಾರೆ.