ಹೈಟೆಕ್ ಶಸ್ತ್ರಾಸ್ತ್ರಗಳ ಖರೀದಿ ಮತ್ತು ನಿರ್ಮಾಣಕ್ಕೆ ಭಾರೀ ಬಜೆಟ್ ಮೀಸಲಿಟ್ಟ ಚೀನಾ

600

ಬೀಜಿಂಗ್: 2050ರ ವೇಳೆಗೆ ವಿಶ್ವದರ್ಜೆಯ ಸೇನಾಪಡೆ ಕಟ್ಟುವ ಚೀನೀ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಪ್ರತಿಜ್ಞೆ ನೆರೆಯ ದೇಶಗಳ ಆತಂಕಕ್ಕೆ ಕಾರಣವಾಗಿದೆ. ಆದರೆ, ಚೀನಾದ ಈ ಮಹತ್ವಾಕಾಂಕ್ಷೆಯಿಂದ ಅಂತಹ ಬೆದರಿಕೆಯೇನೂ ಉಂಟಾಗದು ಎನ್ನುತ್ತಾರೆ ರಕ್ಷಣಾ ತಜ್ಞರು. ಫೆಟರ್ ಜೆಟ್ಗಳು, ನೌಕೆಗಳು ಮತ್ತು ಹೈಟೆಕ್ ಶಸ್ತ್ರಾಸ್ತ್ರಗಳ ಖರೀದಿ ಮತ್ತು ನಿರ್ಮಾಣಕ್ಕೆ ಚೀನಾ ಭಾರೀ ಬಜೆಟ್ ಮೀಸಲಿಟ್ಟಿದ್ದು, ಮುಂದಿನ 30 ವರ್ಷಗಳಲ್ಲಿ ಗುರಿ ತಲುಪುವ ಯೋಜನೆ ಹಾಕಿಕೊಂಡಿದೆ. ಆದರೆ ಜಗತ್ತಿನ ದೊಡ್ಡಣ್ಣನಾಗಲು ಅಮೆರಿಕ ತೆಗೆದುಕೊಂಡ ಅವಧಿಗಿಂತ ಇದು ಕಡಿಮೆಯಿದೆ.

21 ನೇ ಶತಮಾನದ ಮಧ್ಯಭಾಗದಲ್ಲಿ ಪೀಪಲ್ಸ್ ಆರ್ಮಿ ವಿಶ್ವದರ್ಜೆಯ ಸೇನಾಪಡೆಯಾಗಿ ಬೆಳೆಯಬೇಕು ಎಂದು ಜಿನ್ಪಿಂಗ್, ಚೀನೀ ಕಮ್ಯುನಿಸ್ಟ್ ಪಕ್ಷದ ಮಹಾ ಅಧಿವೇಶನದಲ್ಲಿ ನುಡಿದಿದ್ದರು. ಈ ಅಧಿವೇಶನದಲ್ಲಿ 2,300 ಮಂದಿ ಉನ್ನತ ಪ್ರತಿನಿಧಿಗಳು ಭಾಗವಹಿಸಿದ್ದರು.ಚೀನಾದ ಜತೆ ಗಡಿ ವಿವಾದ ಎದುರಿಸುತ್ತಿರುವ ಹಲವು ದೇಶಗಳು ಚೀನಾದ ಈ ಮಹತ್ವಾಕಾಂಕ್ಷೆಯಿಂದ ಆತಂಕಕ್ಕೀಡಾಗಿವೆ.

LEAVE A REPLY

Please enter your comment!
Please enter your name here