ಫಸ್ಟ್ ಸುದ್ದಿ : ಸಿಗರೇಟ್, ಬೀಡಿ ಸೇರಿದಂತೆ ಧೂಮಪಾನ ಮಾಡುವ ಅಭ್ಯಾಸವನ್ನು ನಿತ್ಯ ಬೆಳಸಿಕೊಂಡು ಹೋದಷ್ಟು ಅದರಿಂದ ಮನುಷ್ಯನ ದೇಹದ ಮೇಲೆ ಹೆಚ್ಚು ಸಮಸ್ಯೆಗಳು ಆರಂಭವಾತ್ತದೆ. ಧೂಮಪಾನ ಮಾಡುವುದು ಫ್ಯಾಷನ್ ಎಂದು ನಿಮಗೆ ಅನಿಸಿರಬಹುದು ಅಥವಾ ಸ್ಮೋಕ್ ಮಾಡೋದನ್ನು ಹಿಂದಿನಿಂದಲೆ ಅಭ್ಯಾಸ ಮಾಡಿಕೊಂಡು ಬಂದಿದ್ದು ಅದೆ ಈಗ ಮುಂದುವರೆದುಕೊಂಡು ಹೋಗಿರಬಹುದು. ಅಷ್ಟೇ ಅಲ್ಲದೇ ಧೂಮಪಾನ ಮಾಡುವುದು ಒಂದು ಚಟವಾಗಿ ನೀವು ಬೆಳೆಸಿಕೊಂಡಿರಬಹುದು. ಇದರಿಂದ ಮಾನವನ ದೇಹವನ್ನು ಹಾಳು ಮಾಡುತ್ತಾ ಬುರುವುದರ ಜತೆಗೆ ನಿಮ್ಮ ಲೈಫ್ ಸ್ಟೈಲ್ ಮೇಲೂ ಕೂಡಾ ಪರಿಣಾಮವನ್ನು ಭೀರಲಿದೆ. ಧೂಮಪಾನ ಮಾಡುವುದರಿಂದ ಸೆಕ್ಸ್ ಲೈಫ್ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತಾ ?
- ಧೂಮಪಾನವನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ಪುರುಷರಲ್ಲಿ ಶೀಘ್ರ ಸ್ಖಲನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಗುಪ್ತಾಂಗದಲ್ಲಿನ ಮಸಲ್ಸ್ ಗಳು ಬೇಗನೆ ಶಕ್ತಿ ಕಳೆದುಕೊಳ್ಳುತ್ತವೆ. ಮಹಿಳೆಯರಿಗೆ ತಮ್ಮ ಗುಪ್ತಾಂಗದಲ್ಲಿ ಯಾವುದೇ ರೀತಿಯ ಸೆನ್ಸೇಶನ್ ಕೂಡ ಕಂಡು ಬರೋದಿಲ್ಲ. ಇದರಿಂದ ಸೆಕ್ಸ್ ಕುರಿತು ಆಸಕ್ತಿ ಬೇಗನೆ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ.
- ಧೂಮಪಾನ ಸೇವನೆ ಮಾಡುವುದರಿಂದ ಪುರುಷ ಮತ್ತು ಮಹಿಳೆಯರಲ್ಲಿ ಟೆಸ್ಟೊಸ್ಟೆರೋನ್ ಲೆವೆಲ್ ಮೇಲೆ ಕೂಡಾ ಎಫೆಕ್ಟ್ ಆಗುತ್ತದೆ, ಈ ಹಾರ್ಮೋನ್ ಸೆಕ್ಸ್ ನ ಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಆದರೆ ಧೂಮಪಾನ ಮಾಡುವುದರಿಂದ ಈ ಹಾರ್ಮೋನ್ ಲೆವೆಲ್ ಅಸಮತೋಲನವಾಗಿ ಸೆಕ್ಸ್ ಮಾಡಲು ಅಷ್ಟಾಗಿ ಮೂಡ್ ಬರೋದಿಲ್ಲ.
- ಪುರುಷರ ಗುಪ್ತಾಂಗದ ಕಡೆಗೆ ರಕ್ತ ಸರಿಯಾಗಿ ಪರಿಚಲನೆಯಾದರೆ ಮಾತ್ರ ಲೈಂಗಿಕತೆ ಹೆಚ್ಚಾಗಲು ಸಹಾಯ ಮಾಡುತ್ತದೆ. ಯಾವುದೆ ವ್ಯಕ್ತಿ ಒಂದು ಪ್ಯಾಕ್‌ಗಿಂತ ಹೆಚ್ಚು ಸ್ಮೋಕ್ ಮಾಡುತ್ತಿದ್ದರೆ ಇದರಿಂದ ಗುಪ್ತಾಂಗದ ಕಡೆಗೆ ರಕ್ತ ಪರಿಚಲನೆಯಾಗುವುದು ಕಡಿಮೆಯಾಗುತ್ತದೆ.
- ಇನ್ನು ಧೂಮಪಾನ ಮಾಡುವುದರಿಂದ ಮಹಿಳೆಯರ ಮೇಲೂ ಪರಿಣಾವನ್ನುಂಟು ಮಾಡುತ್ತದೆ. ಮಹಿಳೆಯರು ಹೆಚ್ಚು ಧೂಮಪಾನ ಸೇವನೆ ಮಾಡುತ್ತಿದ್ದರೆ ಅವರಲ್ಲಿ ಬೇಗನೆ ಋತುಬಂಧ ಉಂಟಾಗುತ್ತದೆ, ಅಲ್ಲದೆ ಅವರಲ್ಲಿ ಸರ್ವಿಕಲ್ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚು. ಇದಲ್ಲದೆ ಇಂತಹ ಮಹಿಳೆಯರಿಗೆ ತಾಯಿಯಾಗುವ ಸಾಧ್ಯತೆ ಕೂಡ ಕಡಿಮೆ ಇದೆ.
- ನೀವು ಚೈನ್ ಸ್ಮೋಕರ್ ಆಗಿದ್ದರೆ ಇದರಿಂದ ಲೈಂಗಿಕ ಕ್ಷಮತೆ ಪೂರ್ತಿಯಾಗಿ ಕಡಿಮೆಯಾಗುತ್ತದೆ. ಯಾಕೆಂದರೆ ಪುರುಷರು ಹೆಚ್ಚು ಸ್ಮೋಕ್ ಮಾಡುತ್ತಿದ್ದರೆ ಅವರು ಸ್ಟಾಮಿನ ಕಳೆದುಕೊಳ್ಳುತ್ತಾರೆ. ಆದುದರಿಂದ ಇನ್ನು ಮುಂದೆ ಧೂಮಪಾನ ಸೇವನೆ ಮಾಡೋದನ್ನು ಬಿಟ್ಟು, ದಾಂಪತ್ಯ ಜೀವನ ಸುಧಾರಣೆಯಾಗಲು ಲೈಂಗಿಕ ಜೀವನದತ್ತ ಗಮನ ಹರಿಸಿ.
- ಮಹಿಳೆಯರ ಯೋನಿ ಆಕೆಯ ದೇಹದ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿದೆ. ಇದರಿಂದ ಆಕೆಗೆ ಆರ್ಗಸಂ ಉಂಟಾಗಲು ಸಹಾಯವಾಗುತ್ತದೆ. ಆದರೆ ಧೂಮಪಾನ ಸೇವನೆ ಮಾಡುವುದರಿಂದ ಯೋನಿಯಲ್ಲಿ ಉರಿ, ಊದಿಕೊಳ್ಳುವುದು ಮುಂತಾದ ಸಮಸ್ಯೆ ಕಾಡುತ್ತದೆ.