ಸಿಎಂ ಕುಮಾರಸ್ವಾಮಿ ಕಣ್ಣೀರ ಸಮರ್ಥಿಸಿಕೊಂಡ ಸಚಿವ ಕೃಷ್ಣಬೈರೇಗೌಡ.

282

ಕಲಬುರಗಿ : ಸಮ್ಮಿಶ್ರ ಸರ್ಕಾರದಲ್ಲಿ ಒಳ್ಳೆ ಆಡಳಿತ ನೀಡುವ ಜವಾಬ್ದಾರಿ ನಮ್ಮ ಮೇಲಿದೆ, ವಿಪಕ್ಷದಲ್ಲಿ ಕೂತು ಆರೋಪ ಮಾಡುವುದಕ್ಕೆ ಮಾತ್ರ ಸಿಮೀತವಾಗಿದ್ದಾರೆ ಎಂದು ಗ್ರಾಮೀಣಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು ನಮ್ಮ ಕೆಲಸ ಮೂಲಕ ಅವರ ಪ್ರಶ್ನೆಗೆ ಉತ್ತರ ಕೊಡೊಕೆ ಮುಂದಾಗಿದ್ದೇವೆ. ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾವನಾತ್ಮಕವಾಗಿ ಕಣ್ಣಿರು ಹಾಕಿದ್ದಾರೆ. ಹೊರತು ಕಾಂಗ್ರೆಸ್ ನಿಂದ  ತೊಂದರೆ ಆಗಿದೆ ಎಂದು ಕಣ್ಣೀರ ಹಾಕಿಲ್ಲ. ಕುಮಾರಸ್ವಾಮಿ ಅಳುತ್ತಾ ಕೂತಿಲ್ಲ ಕೆಲಸ ಮಾಡೋದಕ್ಕೆ ಮುಂದಾಗಿದ್ದಾರೆ. ಅವರು ಕೂಡ ಮನುಷ್ಯರೆ ಭಾವನಾತ್ಮಕವಾಗಿ ಕಣ್ಣೀರು ಬಂದಿದೆ. ರಾಜ್ಯದ ಪರವಾಗಿ ಕುಮಾರಸ್ವಾಮಿ ದೆಹಲಿ ಗೆ ತೆರಳಿ ಕೆಲಸ ಮಾಡೋಕೆ ಮುಂದಾಗಿದ್ದಾರೆ. ಕೋಳಿವಾಡ ಹೇಳಿಕೆ ಅದು ಅವರ ವ್ಯೆಯಕ್ತಿಕ ಹೇಳಿಕೆ. ಕಾಂಗ್ರೆಸ್ ಪಕ್ಷಕ್ಕು ಕೋಳಿವಾಡ ಹೇಳಿಕೆಗು ಯಾವುದೆ ಸಂಬಂಧ ಇಲ್ಲ ಅಂತಾ ಹೇಳಿದ್ದಾರೆ. ಕುಮಾರಸ್ವಾಮಿ ಕಣ್ಣಿರಿಗೆ ಕಾಂಗ್ರೆಸ್ ಕಾರಣ ಅಂತಾ ಹೇಳಿಲ್ಲ. ಕುಮಾರಸ್ವಾಮಿಗೆ ನಿರೀಕ್ಷಿತ ಮಟ್ಟದಲ್ಲಿ ಜನರು ಮತ ಹಾಕಿ ಆಯ್ಕೆ ಮಾಡದ ಹಿನ್ನಲೆ ಭಾವನಾತ್ಮಕವಾಗಿ ಕಣ್ಣಿರು ಹಾಕಿದ್ದಾರೆ. ವಿರೋಧ ಪಕ್ಷದವರು ಮಾಧ್ಯಮದವರು ಸೇರಿ ಬೆಂಕಿಗೆ ತುಪ್ಪ ಹಾಕುವಂತಹ ಕೆಲಸ ಮಾಡಿದ್ದಾರೆ. ಉತ್ತರ ಕರ್ನಾಟಕಕ್ಕೆ ಬಜೆಟ್ ನಲ್ಲಿ ಅನ್ಯಾಯ ವಿಚಾರ. ಹಳೆಯ ಬಜೆಟ್ ಅನ್ನೆ ಪೂರಕವಾಗಿ ಮಂಡಿಸಿದ್ದಾರೆ. ನಾವು ಯಾರಿಗೂ ಅನ್ಯಾಯ ಆಗೋದಕ್ಕೆ ಬಿಡೋದಿಲ್ಲ. ಈ ಹಿಂದಿನ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದಾಗ ಬೆರಳೆಣಿಕೆಯಷ್ಟು ಬಾರಿ ಕಲಬುರಗಿ ಗೆ ಬಂದಿರುವ ವಿಚಾರ ಸಂಬಂಧ. ನಾನು ಅನೇಕ ಬಾರಿ ಕಲಬುರಗಿಯ ಅನೇಕ ತಾಲೂಕುಗಳಿಗೆ ಬಂದು ಹೋಗಿದ್ದೆನೆ. ಮಾಧ್ಯಮದವರಿಗೆ ಹಿಟ್ ಆಂಡ್ ರನ್ ಮಾಡೋದು ಅಭ್ಯಾಸವಾಗಿದೆ.ಕೆಲಸ ಮಾಡಿದವರಿಗೆ ಹಗುರವಾಗಿ ಮಾತನಾಡುವಂತಹ ಕೆಲಸಕ್ಕೆ ಮುಂದಾಗಬೇಡಿ ಎಂದಿದ್ದಾರೆ.