ಕೊಪ್ಪದ ಬಸ್ತಿಹಳ್ಳದಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹದ ಪತ್ತೆಗಾಗಿ ಖಾಸಗಿ ಈಜು ಪಟುಗಳಿಂದ ಶೋಧ …

313
firstsuddi

ಚಿಕ್ಕಮಗಳೂರು-  ನೀರಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹವನ್ನು ಹುಡುಕಲು ಗ್ರಾಮಸ್ಥರು ಚಂದಾ ಎತ್ತಿ ಹಣ ಸಂಗ್ರಹಿಸಿ ಖಾಸಗಿ ಈಜು ಪಟುಗಳಿಂದ ಮೃತದೇಹವನ್ನ ಹುಡುಕಿಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಸ್ತಿ ಹಳ್ಳದಲ್ಲಿ ಕಳೆದ ಆರು ದಿನಗಳ ಹಿಂದೆ ಅಶೋಕ್ ಎಂಬ ಯುವಕ ಬೈಕ್ ಸಮೇತ ಕೊಚ್ಚಿ ಹೋಗಿದ್ದ. ಎರಡು ದಿನದ ಬಳಿಕ ಆತನ ಬೈಕ್ ಅದೇ ಹಳ್ಳದಲ್ಲಿ ಪತ್ತೆಯಾಗಿತ್ತು. ಆದ್ರೆ, ಮೃತದೇಹ ಸಿಕ್ಕಿರಲಿಲ್ಲ. ಸ್ಥಳಕ್ಕೆ ಬಂದ ಎನ್.ಡಿ.ಆರ್.ಎಫ್ ತಂಡ ಮೂರು ದಿನಗಳ ಕಾಲ ಮೃತದೇಹಕ್ಕಾಗಿ ಹುಡುಕಾಟ ನಡೆಸಿ ಕೈಚೆಲ್ಲಿದ್ರು. ಭಾರೀ ಮಳೆ ಇದ್ದ ಕಾರಣ ಎನ್.ಡಿ.ಆರ್.ಎಫ್ ನೀರಿನ ರಭಸ ಕಂಡು ವಾಪಸ್ಸಾಗಿದ್ರು. ಆದ್ರೆ, ಸ್ಥಳಿಯರು ಮೃತದೇಹಕ್ಕಾಗಿ ಕಳೆದ ಆರು ದಿನಗಳಿಂದ ಶೋಧ ನಡೆಸ್ತಿದ್ದಾರೆ. ಆದ್ರೆ, ಮೃತದೇಹವಿನ್ನೂ ಪತ್ತೆಯಾಗಿಲ್ಲ. ಸ್ಥಳಿಯರು ಗ್ರಾಮಸ್ಥರಿಂದ ಚಂದಾ ಎತ್ತುವ ಮೂಲಕ ಹಣ ಸಂಗ್ರಹಿಸಿ ಖಾಸಗಿ ಈಜು ಪಟುಗಳನ್ನ ಕರೆಸಿ ಮೃತದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ. ಆದ್ರೆ, ಜಿಲ್ಲಾಡಳಿತ ಯಾವುದೇ ಸಹಕಾರ ನೀಡಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.