ವಿಷ ಕೊಟ್ಟಿಲ್ಲ ಸಿ.ಎಂ ಸ್ಥಾನ ಕೊಟ್ಟಿದ್ದೇವೆ. – ಮಾಜಿ ಸಚಿವ ಎ ಮಂಜು…

330
firstsuddi

ಮೈಸೂರು- ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯದ ರೈತರ, ಜನತೆಯ ಕಣ್ಣೀರು ಒರೆಸಬೇಕು ಬದಲಾಗಿ ತಾವೇ ಕಣ್ಣೀರು ಹಾಕುತ್ತಿರುವುದು ಅವರ ಅಸಹಾಯಕತೆಯನ್ನು ತೋರಿಸುತ್ತಿದೆ ಎಂದು ಮಾಜಿ ಸಚಿವ ಎ.ಮಂಜು ವ್ಯಂಗ್ಯವಾಡಿದ್ದು, ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದ್ದು ಐದು ವರ್ಷದ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟಿದೆಯೆ ವಿನಃ ವಿಷ ಕೊಟ್ಟಿಲ್ಲ, ಅವರು ಕೇಳಿರುವ ಪ್ರಮುಖ ಖಾತೆಗಳನ್ನೇ ಕೊಟ್ಟಿದ್ದೇವೆ. ಕಾಂಗ್ರೆಸ್ ನಾಯಕರು, ಶಾಸಕರು ತಪ್ಪು ಮಾಡಿರುವ ರೀತಿಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಿರುವುದು ಸರಿಯಲ್ಲ, ಅವರ ಇತ್ತೀಚಿನ ಹೇಳಿಕೆಗಳಿಂದಾಗಿ ಓರ್ವ ಕಾಂಗ್ರೆಸ್ಸಿಗನಾಗಿ ನನಗೆ ನೋವಾಗಿದೆ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಆಡಳಿತ ನಡೆಸಬೇಕು ಹಾಗೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಗರ ಸಂಬಂಧಕ್ಕೆ ಹೋಲಿಸಿ ಮಗ ಮಾತ್ರ ಚೆನ್ನಾಗಿರಬೇಕು ಅಂದರೆ ಹೇಗೆ.? ಮದುವೆ ಮಾಡಿಕೊಟ್ಟ ಅಳಿಯನು ಕೂಡ ಚೆನ್ನಾಗಿರಬೇಕು ಅಲ್ವೇ.? ಕೇವಲ ಮಗ ಮಾತ್ರ ಕಷ್ಟಪಡುತ್ತಿದ್ದಾನೆ ಅನ್ನೋದು ಎಷ್ಟರಮಟ್ಟಿಗೆ ಸರಿ. ಎಲ್ಲರನ್ನು ಒಟ್ಟಿಗೆ ಸಮನಾಗಿ ಸರಿದೂಗಿಸಿಕೊಂಡು ಹೋಗಬೇಕಿದೆ ಎಂದು ತಿಳಿಸಿದರು.