ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಂವಿಧಾನ ಬದಲಿಸ ಹೊರಟವರಿಗೆ ಅದರ ಆಶಯಗಳ ಮೇಲೆ ನಂಬಿಕೆ ಇಲ್ಲ. ಪ್ರಜಾಸತ್ತಾತ್ಮಕವಾಗಿ ರಚನೆಯಾದ ಸರ್ಕಾರ ಬೀಳಿಸಲು ನರೇಂದ್ರ ಮೋದಿ ಪಿತೂರಿ ನಡೆಸಿದ್ದಾರೆ. ಕರ್ನಾಟಕದ ಬಿಜೆಪಿ ನಾಯಕರಿಗೆ ರಫೇಲ್ ಹಗರಣದ ಹಣ ಬಂದಿದೆಯೆ? ಇದರಲ್ಲೇ ಶಾಸಕರ ಖರೀದಿ ವಿಫಲ ಪ್ರಯತ್ನ ಸಾಗಿದೆಯೇ? ಪ್ರಜಾಪ್ರಭುತ್ವ ಹಾಳುಗೆಡುವ ಬಿಜೆಪಿ ಯತ್ನ ವಿಫಲವಾಗಲಿದೆ ಎಂದು ಬಿಜೆಪಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಲಾಗಿದೆ.