ಬೆಂಗಳೂರು : ಸಿನಿಮಾ ಶೂಟಿಂಗ್ ವೇಳೆ ಸಿಲಿಂಡರ್ ಸ್ಪೋಟಗೊಂಡು ಇಬ್ಬರು ಮೃತಪಟ್ಟಿರುವ ಘಟನೆ ಬಾಗಲೂರಿನ ಶೆಲ್ ಕಂಪನಿ ಬಳಿ ನಡೆದಿದೆ. ಸುಮೈರಾ (28) ಆಯಿರಾ (8) ಮೃತರು. ‘ರಣಂ’ ಸಿನಿಮಾ ಶೂಟಿಂಗ್ ವೀಕ್ಷಿಸುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಸ್ಥಳದಲ್ಲೇ ತಾಯಿ ಮಗಳು ಮೃತಪಟ್ಟಿದ್ದಾರೆ.ಗಾಯಗೊಂಡಿರುವ ಮತ್ತೊಂದು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










