ಚಿಕ್ಕಮಗಳೂರಿನ ಇಂದಾವರದಲ್ಲಿ ಶಾಸಕ ಸಿ.ಟಿ.ರವಿ ಕುಣಿದು ಕುಪ್ಪಳಿಸಿದ್ದಾರೆ. ಹಬ್ಬದ ನಿಮಿತ್ತ ನಿನ್ನೆ ಸಂಜೆ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಸಿ.ಟಿ ರವಿ, ರಾಜಕೀಯ ಚಟುವಟಿಕೆಯ ಬ್ಯುಸಿ ಮಧ್ಯೆಯೂ ಗ್ರಾಮಸ್ಥರೊಂದಿಗೆ ಸಮಯ ಕಳೆದ್ರು. ಅಷ್ಟೇ ಅಲ್ಲದೆ, ತಲೆಗೆ ಪೇಟ ಧರಿಸಿ ಹಳ್ಳಿ ವಾದ್ಯಕ್ಕೆ ಗ್ರಾಮಸ್ಥರೊಂದಿಗೆ ಸೇರಿ ಕುಣಿದು ಕುಪ್ಪಳಿಸಿದ್ದಾರೆ. ಗ್ರಾಮೀಣ ಶೈಲಿಯಲ್ಲಿ ನುಡಿಸುವ ವಾದ್ಯಕ್ಕೆ ತಕ್ಕಂತೆ ಡ್ಯಾನ್ಸ್ ಮಾಡಿರೋದು ವಿಶೇಷವಾಗಿತ್ತು. ಶಾಸಕ ಸಿ.ಟಿ ರವಿ ಸ್ಟೆಪ್ ಹಾಕುತ್ತಿದ್ದಂತೆ ಗ್ರಾಮದ ನೂರಾರು ಜನ ಅವರನ್ನ ಸುತ್ತುವರೆದು ಶಾಸಕ ರವಿಗೆ ಸಾಥ್ ನೀಡಿದ್ರು…..