ಬೆಂಗಳೂರು:ಇಟಲಿಯ ಲೇಕ್ ಕೋಮೋದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಅವರ ವಿವಾಹ ಮಹೋತ್ಸವ ನಡೆದಿದೆ. ಬುಧವಾರ ಕೊಂಕಣಿ ಸಂಪ್ರದಾಯದಂತೆ ಮದುವೆ ನಡೆದರೆ, ಗುರುವಾರ ಸಿಂಧಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ತಮ್ಮ ಅಭಿಮಾನಿಗಳಿಗಾಗಿ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಇಬ್ಬರು ತಮ್ಮ ವಿವಾಹ ಸಂಭ್ರಮದ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ನವೆಂಬರ್ 21 ರಂದು ಬೆಂಗಳೂರಿನಲ್ಲಿ ಮತ್ತು ನವೆಂಬರ್ 28 ರಂದು ಮುಂಬೈನ ಪ್ರತಿಷ್ಟಿತ ಹೋಟೆಲ್ ನಲ್ಲಿ ದೀಪಿಕಾ ಪಡುಕೋಣೆ ಹಾಗೂ ರಾಣ್ ವೀರ್ ಸಿಂಗ್ ಅವರ ಆರತಕ್ಷತೆ ನಡೆಯಲಿದೆ.











