ಶೋಭಾ ಕರಂದ್ಲಾಜೆಯನ್ನ ಸೋಲಿಸೋದೆ ನನ್ನ ಗುರಿ : ಪ್ರಸನ್ನಕುಮಾರ್

548

ಚಿತ್ರದುರ್ಗ: ಮುಂಬರೋ ವಿಧಾನಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಚುನಾವಣೆಗೆ ನಿಂತು, ಅವರನ್ನ ಸೋಲಿಸೋದ ನನ್ನ ಜೀವನದ ಗುರಿ ಎಂದು ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ್ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಪ್ರಸನ್ನ ಕುಮಾರ್, ಕಳೆದ ಎಂಎಲ್ಎ ಚುನಾವಣೆಯಲ್ಲಿ ಕೆಜೆಪಿ ಪಕ್ಷಕ್ಕೆ ಸೇರಿದ್ದ ಶೋಭಾ ಟಿಕೆಟ್ ಮಾರಿಕೊಂಡು 500 ಕೋಟಿ ಹಣ ವಸೂಲಿ ಮಾಡಿದ್ದಾರೆ ಎಂದು ಕರಂದ್ಲಾಜೆ ವಿರುದ್ಧ ಗಂಭೀರ ಆರೋಪ ಮಾಡಿದರು. ಸಮಯ ಬರಲಿ ಆಗ ಬಿಎಸ್ವೈ ಹಾಗೂ ಶೋಭಾ ಕರಂದ್ಲಾಜೆ ಅವರ ಮದುವೆ ಸಿಡಿಯನ್ನ ಬಿಡುಗಡೆಗೊಳಿಸುತ್ತೇನೆ. ಭದ್ರತೆಗಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಆದ್ರೆ, ಸರ್ಕಾರ ಆ ಪತ್ರಕ್ಕೆ ಇನ್ನೂ ಉತ್ತರ ಕೊಟ್ಟಿಲ್ಲ ಎಂದರು.