ಚಿಕ್ಕಮಗಳೂರು : ವಾರಸ್ದಾರ ಧಾರಾವಾಹಿ ಬಾಡಿಗೆ ಹಣ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಕಿಚ್ಚ ಸುದೀಪ್ ಮೇಲಿನ ಕೇಸ್ ಹಿಂಪಡೆಯುವಂತೆ ಧಮ್ಕಿ ಹಾಕಿರುವ ಘಟನೆ ನಡೆದಿದೆ. ಕಿಚ್ಚ ಸುದೀಪ್ ನಿರ್ಮಾಣ ಮಾಡುತ್ತಿದ್ದ ವಾರಸ್ದಾರ ಧಾರಾವಾಹಿ ಚಿತ್ರೀಕರಣಕ್ಕಾಗಿ ದೀಪಕ್ ಮಯೂರ್ ಎಂಬುವರ ಮನೆಯನ್ನು ಬಾಡಿಗೆ ಪಡೆದಿದ್ದರು. ಸುದೀಪ್ ಅವರು ಬಾಡಿಗೆ ಹಣವನ್ನು ನೀಡದ ಹಿನ್ನೆಲೆ ಸುದೀಪ್ ವಿರುದ್ಧ ಬಾಡಿಗೆ ಹಣ ನೀಡದ ಕುರಿತು ಈ ಹಿಂದೆ ದೀಪಕ್ ಮಯೂರ್ ಅವರು ಮಲ್ಲಂದೂರು ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದರು. ಈ ಬಗ್ಗೆ ನವೀನ್ ಎಂಬುವರು ಕಿಚ್ಚ ಸುದೀಪ್ ಮ್ಯಾನೇಜರ್ ಎಂದೇಳಿಕೊಂಡು ದೀಪಕ್ ಮಯೂರ್ ಅವರಿಗೆ ಕಿಚ್ಚ ಸುದೀಪ್ ಮೇಲಿನ ಕೇಸ್ ಹಿಂಪಡೆಯುವಂತೆ ಧಮ್ಕಿ ಹಾಕಿದ್ದಾರೆ. ಈ ಬಗ್ಗೆ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ನವೀನ್ ವಿರುದ್ಧ ದೂರು ದಾಖಲಿಸಲಾಗಿದ್ದು, ನಿನ್ನೆ ನವೀನ್ ಅವರನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.