ವರನಿಗೆ ತಾಳಿ ಕಟ್ಟಿದ ವಧು…

160
firstsuddi

ವಿಜಯಪುರ: ಸಾಮಾನ್ಯವಾಗಿ ವರ ವಧುವಿಗೆ ತಾಳಿಕಟ್ಟೋದನ್ನು ನೋಡಿದ್ದೇವೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ವಿವಾಹ ನೆರವೇರಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವಧುವೇ ವರನಿಗೆ ತಾಳಿ ಕಟ್ಟುವ  ಮೂಲಕ ವಿಶೇಷವಾಗಿ ವಿವಾಹ ನೆರವೇರಿದ್ದು, ಪ್ರಭುರಾಜ್ ಜೊತೆ ಅಂಕಿತಾ ಹಾಗೂ ಅಮಿತ್ ಜೊತೆ ಪ್ರಿಯಾ ಎನ್ನುವ ಎರಡು ಜೊಡಿಯ ವಿವಾಹದಲ್ಲಿ ವರರಿಗೆ ವಧುಗಳೇ ತಾಳಿ ಕಟ್ಟಿದ್ದು, ತಾಳಿಯ ಜೊತೆ ರುದ್ರಾಕ್ಷಿ ಪೋಣಿಸಿ ಕಟ್ಟಿದ್ದು, ಬಸವ ಧರ್ಮದ ತತ್ವದ ಅಡಿಯಲ್ಲಿ ಮದುವೆ ಕಾರ್ಯ ನಡೆದಿದೆ. ವಿವಾಹಕ್ಕೆ ಆಗಮಿಸಿದವರಿಗೆ ಬಸವಣ್ಣನವರ ಕುರಿತಾದ ವಚನಸುಧೆ, ವಚನವರ್ಷ ಪುಸ್ತಕಗಳನ್ನು  ವಿತರಿಸಿದ್ದಾರೆ.