ಬೆಂಗಳೂರು: ಹಿರಿಯ ನಟ ಶಂಕರ್ ಅಶ್ವಥ್ ಅವರು ಫೇಸ್ ಬುಕ್ ನಲ್ಲಿ ಗ್ರೇಟ್ ಅರ್ಜುನ್ ಸರ್ಜಾ ಎಂದು ಪೋಸ್ಟ್ ಮಾಡಿದ್ದಾರೆ.ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಜೊತೆಗೆ ನಟಿಸುತ್ತಿರುವ ಶಂಕರ್ ಅಶ್ವಥ್ ಅವರು ಅರ್ಜುನ್ ಸರ್ಜಾ ಅವರ ಫೋಟೋ ಹಿಂದಿನ ಘಟನೆಯನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ..?
ಗ್ರೇಟ್ ಅರ್ಜುನ್ ಸರ್ಜಾ-
ಈ ಗುಣಕ್ಕೆ ಏನೆಂದು ನಾ ಹೇಳಲಿ:
ಇದು ಸತ್ಯ ನಾನು ಹೈದ್ರಾಬಾದ್ ನಲ್ಲಿ ಪೊಗರು ಚಿತ್ರೀಕರಣಕ್ಕೆ ಹೋದ ಸಂದರ್ಭದಲ್ಲಿ ನಡೆದ ನೈಜಸಂಗತಿ ಇದರಲ್ಲಿ ಯಾವ ಉಪ್ಪು ಸೊಪ್ಪು ಬೆರತಿಲ್ಲ.
ನಾಯಕ ನಟರಾದ ಧೃವ ಸರ್ಜಾ “ನಾನು ಚಿಕ್ಕವನಿದ್ದಾಗ ನಿಮ್ಮ ಮನೆಗೆ ಮಾಮ ಅರ್ಜುನ್ ಸರ್ಜಾ ಜೊತೆಯಲ್ಲಿ ಬಂದಿದ್ದೆ” ಅಂದಾಗ ನನಗೆ ಜ್ಞಾಪಕ ಬರಲಿಲ್ಲ. ಅದಕ್ಕೆ “ನಾಳೆ ನೀವು ಇರ್ತೀರಾ ಮಾಮನೂ ಇಲ್ಲಿ ಬೇರೆ ಚಿತ್ರೀಕರಣ ಕ್ಕೆ ಬಂದಿದ್ದಾರೆ ಅವರ ಹತ್ತಿರ ಆ ಫೋಟೋ ಇದೆ ತೋರಿಸ್ತೇನೆ” ಎಂದಾಗ,ಇಲ್ಲಾ ನಾನು ಬೇರೆ ಚಿತ್ರೀಕರಣಕ್ಕೆ ಕೋಲಾರಕ್ಕೆ ಹೋಗಬೇಕೆಂದೆ.ಆಗ ತಕ್ಷಣವೇ ಅರ್ಜುನ್ ಸರ್ಜಾಗೆ ಫೋನ್ ಮಾಡಿ ಅವರ ಮೊಬೈಲ್ ನಲ್ಲಿದ್ದ ಈ ಫೋಟೋ ತರಿಸಿಕೊಂಡು ನನಗೆ ಕಳುಹಿಸಿದರು.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ 2006ನೇ ಇಸವಿಯಲ್ಲಿ ನಮ್ಮ ತಂದೆಯನ್ನು ನೋಡಲು ಬಂದಾಗ ತೆಗೆದ ಈ ಫೋಟೋ ಹದಿಮೂರು ವರ್ಷಗಳ ನಂತರವೂ ಅರ್ಜುನ್ ಸರ್ಜಾರ ಮೊಬೈಲ್ ನಲ್ಲಿದೆ ಎಂದರೆ ಆತ ನನ್ನ ತಂದೆಗೆ ಎಷ್ಟು ಗೌರವ ಕೊಡುತ್ತಾರೆ,ಎಂತಹ ದೊಡ್ಡ ಮನುಷ್ಯ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.











