ಚಿಕ್ಕಮಗಳೂರು : ಅವರು ಹುಟ್ಟಿದ್ದು ಇಸ್ರೇಲ್ ನಲ್ಲಿ. ಅವರಿಗೆ ತಾಯ್ನಾಡಿನ ಸಂಸ್ಕೃತಿಯ ಅರಿವಿದ್ಯೋ ಇಲ್ವೋ ಗೊತ್ತಿಲ್ಲ. ಆದ್ರೆ, ಭಾರತೀಯ ಸಂಸ್ಕೃತಿ, ರೂಢಿ-ಸಂಪ್ರಾದಯ, ಆಚಾರ-ವಿಚಾರಕ್ಕೆ ಮಾತ್ರ ಫುಲ್ ಫಿದಾ ಆಗಿದ್ದಾರೆ. ಇಸ್ರೇಲ್ ನಿಂದ ಬಂದು ಸಂಸ್ಕೃತದ ಅಧ್ಯಯನದಲ್ಲಿರೋ ಆ ವಿದ್ಯಾರ್ಥಿಗಳು ಭಾರತೀಯರು ನಾಚುವಂತೆ ಸಂಸ್ಕೃತ ಕಲೆಯುತ್ತಿದ್ದಾರೆ.
ಭಾರತೀಯರೇ ಭಾರತೀಯ ಸಂಸ್ಕೃತಿಗೆ ಹಾಲು-ತುಪ್ಪಾ ಬಿಡ್ತಿರೋ ಕಲೀಗಾಲವಿದು. ದಿನದಿಂದ ದಿನಕ್ಕೆ ಪಾಶ್ಚಿಮಾತ್ಯಸಂಸ್ಕೃತಿಯ ದಾಸರಾಗ್ತಿರೋ ಭಾರತೀಯರಿಗೆ ನಾವು-ನಮ್ಮದೆಂಬುದರ ಅರಿವಿಲ್ಲದಂತಾಗಿದೆ. ಇಲ್ಲಿ ಸಂಸ್ಕೃತ ಕಲೆಯತ್ತಿರೋ ಇವರು ಮೂಲತಃ ಇಸ್ರೇಲ್ ನವರು. ಇಸ್ರೇಲ್ ನಲ್ಲಿ ಸಂಸ್ಕೃತ ದಲ್ಲೇ ಪಿಎಚ್ ಡಿ ಪಡೆದ ಉಪನ್ಯಾಸಕ ರಫಿ ನಾಲ್ಕು ವಿದ್ಯಾರ್ಥಿಗಳೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. ರಫಿ, ತನ್ನ ವಿದ್ಯಾರ್ಥಿಗಳಿಗೆ ಭಾರತದ ಸಂಸ್ಕೃತ, ಭಾಷೆ, ಆಚಾರ-ವಿಚಾರ ತಿಳಿಸೋಕೆ ವಿದ್ಯಾರ್ಥಿಗಳಾದ ಯಾಗ್ ದೆನ್, ದಾನಾ, ನಿಯೋಮಿ, ಸೇಹೆರಾ ಎಂಬ ನಾಲ್ಕು ವಿದ್ಯಾರ್ಥಿಗಳನ್ನ ಕರೆತಂದಿದ್ದಾರೆ.
ಇವೆರೆಲ್ಲರೂ ಭಾರತೀಯ ಸಂಸ್ಕೃತಕ್ಕೆ ಮನಸೋತು ಆಸಕ್ತಿಯಿಂದ ಸಂಸ್ಕೃತ ಕಲಿಯೋಕೆ ಮುಂದಾಗಿದ್ದಾರೆ. ಇಸ್ರೇಲ್ ನಲ್ಲಿ ವಿದ್ಯಾಬ್ಯಾಸ ನಡೆಸುತ್ತಿರುವ ಇವರು ರಜೆ ಸಮಯದ 15 ದಿನಗಳ ಕಾಲ ಸಂಸ್ಕೃತ ಕಲಿಸೋಕೆ ಉಪನ್ಯಾಸಕ ರಫಿ ಜೊತೆ ಭಾರತಕ್ಕೆ ಬಂದಿದ್ದಾರೆ, ಈ ಟೀಮ್ ಸದ್ಯ ಹಿರೇಮಗಳೂರಿನಲ್ಲಿ ಸಂಸ್ಕೃತ ಕಲಿಯುತ್ತಿದ್ದಾಳೆ. ಇವರ ಮಾತು-ಕಥೆ, ನಯಾ-ವಿನಯ ಮಾತ್ರ ಭಾರತೀಯರು ನಾಚುವಂತಿದೆ. ಸಂಸ್ಕೃತದ ಮೇಲಷ್ಟೆ ಅಲ್ಲದೆ ಭಾರತವಂದ್ರು ಕೂಡ ಇವರಿಗೆ ಅಷ್ಟೆ ಗೌರವ.
ಭಾಷೆ ಗೊತ್ತಿಲ್ಲ, ಇಲ್ಯಾರು ಸ್ನೇಹಿತರು-ಸಂಬಂಧಿಗಳಿಲ್ಲ. ಇಲ್ಲಿನ ಊಟ-ತಿಂಡಿಯ ಅರಿವಿಲ್ಲ. ಆದ್ರು ಕೂಡ ಹಿರೇಮಗಳೂರಿನಲ್ಲಿ ಉಳಿದುಕೊಂಡು ಹಗಲಿರುಳು ಸಂಸ್ಕೃತ ಕಲಿಯುತ್ತಿರೋ ಈ ಟೀಮ್ ಭಾರತೀಯ ಪ್ರೀತಿಗೆ ಶಹಬಾಸ್ ಎನ್ನಲೇಬೇಕು. ನಾವು ಜಗತ್ತಿನ ಯಾವುದೇ ದೇಶಕ್ಕೆ ಹೋದ್ರು ಒಂದೆರಡು ರೀತಿಯ ರೂಢಿ-ಸಂಪ್ರದಾಯವನ್ನ ನೋಡ್ಬೋದು. ಆದ್ರೆ, ಭಾರತದಲ್ಲಿ ಮಾತ್ರ ನೂರಾರು ಕಲೆ, ಸಂಸ್ಕೃತಿಯನ್ನ ಕಲಿಯೋಕೆ ಸಾಧ್ಯವೆಂದು ಭಾರತಕ್ಕೆ ಬಂದಿದ್ದೇವೆ ಅಂತಾರೆ ಉಪನ್ಯಾಸಕ ರಫಿ. ಕಳೆದ ಒಂದು ವಾರದಿಂದ ಸಂಸ್ಕೃತ ಕಲೀಯುತ್ತಿರೋ ಇವರು ಆರಂಭದಲ್ಲಿ ಸಂಸ್ಕೃತದ ಜೊತೆ ಇಂಗ್ಲೀಷ್ ಬಳಸುತ್ತಿದ್ರು ಆದ್ರೀಗ, ಸಂಪೂರ್ಣವಾಗಿ ಸಂಸ್ಕೃತದಲ್ಲೇ ಮಾತನಾಡುವಷ್ಟು ಸಮರ್ಥರಾಗಿದ್ದಾರೆ ಅನ್ನೋದು ಶಿಕ್ಷಕ ವೈಷ್ಣವ್ ಮಾತು.
ಒಟ್ಟಾರೆ, ನಿಜಕ್ಕೂ ಭಾರತೀಯರಿಗೆ ಗರ್ವ ತರುವಂತಹಾ ಸ್ಟೋರಿ ಇದು. ನಮ್ಮ ಸಂಸ್ಕೃತಿಯನ್ನ ಜಗತ್ತೆ ಮೆಚ್ಚಿಕೊಂಡಿದೆ ಇಷ್ಟಪಡ್ತಿದೆ ಎಂದು ಹೆಮ್ಮೆ ಪಡೋದ್ರ ಜೊತೆ ಅದರ ಅಭಿವೃದ್ಧಿ ಹಾಗೂ ಉಳಿವಿಗೆ ನಾವೇನು ಮಾಡ್ತಿದ್ದೇವೆಂಬುದು ಇಲ್ಲಿ ಬಹುಮುಖ್ಯ. ಇನ್ನಾದ್ರು ನಾವುಗಳು ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗೋ ಬದ್ಲು ನಾವು-ನಮ್ಮದನ್ನ ಉಳಿಸಿ-ಬೆಳೆಸಿದ್ರೆ ಜಗತ್ತೇ ಭಾರತಕ್ಕೆ ಜೈ ಅನ್ನೋದ್ರಲ್ಲಿ ಎರಡು ಮಾತಿಲ್ಲ.