ಮಂಡ್ಯ : ತನ್ನ ಮದುವೆಗೆ ಚಲಚಿತ್ರ ನಟ ಬರಬೇಕು ಅಂತ ಹಟ ಹಿಡಿಯೋರನ್ನ ನೊಡಿದ್ದವಿ ಆದ್ರೆ ರಾಜಕಾರಣಿಯೊಬ್ಬರು ಮಧುವೆಗೆ ಬರಬೇಕು ಅಂತ ಉಪವಾಸ ಕುಳಿತಿರೊ ಘಟನೆ ಮಂಡ್ಯದಲ್ಲಿನಡೆದಿದೆ. ಹೌದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ತನ್ನ ಮಧುವೆಗೆ ಬರುವಂತೆ ಒತ್ತಾಯಿಸಿ ಮಂಡ್ಯಜಿಲ್ಲೆ ಮದ್ದೂರು ತಾಲ್ಲೊಕು ಕೊಕ್ಕರೆ ಬೆಳ್ಳೂರು ಗ್ರಾಮದ ಯುವಕ ಉಪವಾಸ ದಲ್ಲಿ ತೊಡಗಿದ್ದಾನೆ.
ಮದುವೆಗೆ ಸಿದ್ದತೆ ನಡೆಸಿರುವ ಮೂವತ್ತು ವರ್ಷದ ರವಿ ಎಂಬುವ ಉಪವಾಸ ನಿರತನಾಗಿದ್ದು ಮನೆಯವರಲ್ಲಿ ಆತಂಕ ಮನೆ ಮಾಡಿದೆ. ಕುಮಾರಸ್ವಾಮಿ ಅಭಿಮಾನಿಯಾಗಿರುವ ರವಿಗೆಇದೇ ಡಿಸೆಂಬರ್ ೧ರಂದುಮದುವೆಯಾಗುತ್ತಿರುವ ರವಿ, ಕುಮಾರಸ್ವಾಮಿ ಅವರನ್ನು ಮದುವೆಗೆ ಕರೆಸಲು ಜೆಡಿಎಸ್ ಮುಖಂಡರ ಬಳಿ ಮನವಿ ಮಾಡಿದ್ದ. ಆದ್ರೆ ಕುಮಾರಸ್ವಾಮಿ ಬರುವ ಬಗ್ಗೆ ಭರವಸೆ ಕೊಡದ ಜೆಡಿಎಸ್ ಮುಖಂಡರ ವಿರುದ್ದ ಬೇಸರದಿಂದ ಮನನೊಂದು ಒಂದು ದಿನದ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾನೆ ತನ್ನ ಮನೆಯ ಮುಂದೆ ಕುಳಿತುಲಗ್ನ ಪತ್ರಿಕೆ, ಕುಮಾರಸ್ವಾಮಿ ಫೋಟೋ ಮುಂದೆ ಉಪವಾಸಮಾಡುತ್ತಿರುವ ರವಿಮದುವೆಗೆ ಕುಮಾರಣ್ಣ ಬರಲೇ ಬೇಕು ಎಂದು ಒತ್ತಾಯಿಸಿಉಪವಾಸದ ಮೂಲಕ ಪ್ರತಿಭಟನೆ ಮಾಡ್ತಾ ಇದ್ದಾನೆ.