ಕೊಡಗಿನ ಸಂತ್ರಸ್ತರಿಗೆ ನೆರವು ನೀಡಿದ ಬಾರ್‍ಲೈನ್ ರಸ್ತೆಯ ಗೆಳೆಯರ ಬಳಗ…

479
firstsuddi

ಚಿಕ್ಕಮಗಳೂರು -ಕೊಡಗಿನಲ್ಲಿ ಅತಿವೃಷ್ಠಿಯಿಂದ ತತ್ತರಿಸಿರುವ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿರುವ ಬಾರ್‍ಲೈನ್ ರಸ್ತೆಯ ಗೆಳೆಯರ ಬಳಗವೊಂದು ಸೋಮವಾರ ಒಂದು ಲಕ್ಷ ರೂ ಮೌಲ್ಯದ ಅಗತ್ಯ ವಸ್ತುಗಳನ್ನು ನಗರದಿಂದ ಮಡಕೇರಿಗೆ ಕೊಂಡೊಯ್ಯಿತು.
ಆರು ಜನ ಸ್ನೇಹಿತರು ತಮ್ಮ ತಮ್ಮಲ್ಲೇ ಒಗ್ಗೂಡಿಸಿದ ಒಂದು ಲಕ್ಷ ರೂ ನಲ್ಲಿ 600 ಸ್ವೆಟರ್, 100 ರಗ್ಗು, 100 ಚಾಪೆ, ಮಹಿಳೆಯರ ಉಡುಪುಗಳು, ಬಿಸ್ಕತ್, ಬ್ರೆಡ್ ಸೇರಿದಂತೆ ಅತ್ಯಗತ್ಯ ವಸ್ತುಗಳನ್ನು ತಾವೇ ಸಂತ್ರಸ್ತರಿಗೆ ನೇರವಾಗಿ ವಿತರಿಸಲು ಎರಡು ವಾಹನಗಳಲ್ಲಿ ಕೊಂಡೊಯ್ದರು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಮುರಳಿ ತಕ್ಷಣಕ್ಕೆ ತಮ್ಮಲ್ಲಿರುವ ಹಣವನ್ನು ಒಗ್ಗೂಡಿಸಿ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಿ ಕೊಂಡೊಯ್ಯಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೆರವನ್ನು ತಮ್ಮ ಗೆಳೆಯರ ಬಳಗದಿಂದ ನೀಡಲಾಗುವುದು ಎಂದು ತಿಳಿಸಿದರು.ಸಿ.ಎಸ್.ಮುರಳಿ,ಎಸ್.ಟಿ.ಚಂದ್ರೇಗೌಡ, ಪಿ.ಎಸ್.ಪ್ರಶಾಂತ್, ಎಂ.ಗಿರೀಶ್‍ಗೌಡ, ಹೆಚ್.ಕೆ.ಮಂಜುನಾಥ್ ಹಾಜರಿದ್ದರು.