ಹಾಸನ : ವರ್ಷಕ್ಕೊಮ್ಮೆ ಬಾಗಿಲು ತೆಗೆಯುವ ಹಾಸನಾಂಬ ದೇವಾಲಯದ ಬಾಗಿಲು ಕಳೆದ ನವೆಂಬರ್ 1ರಂದು ತೆರೆದು 8 ದಿನಗಳ ಕಾಲ ಭಕ್ತರಿಗೆ ದರ್ಶನ ನೀಡಿದ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲನ್ನು ಇಂದು ಮಧ್ಯಾಹ್ನ 12.30 ರ ಸುಮಾರಿಗೆ ಮುಚ್ಚಲಾಗುತ್ತದೆ. ಹಾಸನಾಂಬ ದೇವಿಯ ದರ್ಶನಕ್ಕೆ ಕೊನೆ ದಿನವಾದ ನಿನ್ನೆ ಭಕ್ತ ಸಾಗರವೇ ಹರಿದುಬರುತ್ತಿತ್ತು. ಭಕ್ತರಿಗೆ ರಾತ್ರಿವರೆಗೂ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.