ಶ್ರೀಗಳು ಬೇಗ ಗುಣಮುಖರಾಗಲಿ: ರಾಹುಲ್ ಗಾಂಧಿ…

202
firstsuddi

ನವದೆಹಲಿ: ಸಿದ್ದಗಂಗಾ ಮಠದ ಡಾ.ಶಿವಕುಮಾರ ಶ್ರೀಗಳು ಬೇಗ ಗುಣಮುಖರಾಗಲಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಫೇಸ್‌ಬುಕ್​ನಲ್ಲಿ ಪೋಸ್ಟ್ ಮಾಡಿದ್ದು, ಬಸವ ತತ್ವಗಳಿಗೆ ಜೀವ ತುಂಬಿದ ತ್ರಿವಿಧ (ಅನ್ನ/ಅಕ್ಷರ/ಜ್ಞಾನ) ದಾಸೋಹಿ, ಅಸಂಖ್ಯ ಭಕ್ತರ ಬದುಕಿನ ಬೆಳಕು ನಡೆದಾಡುವ ದೇವರು, ಶತಾಯುಷಿ ಡಾ. ಶ್ರೀ ಶಿವಕುಮಾರ ಸ್ವಾಮಿಗಳ ದರ್ಶನ ಮಾಡಿ ಆಶಿರ್ವಾದ ಪಡೆದಿದ್ದೆ.ಶ್ರೀಗಳು ಅನಾರೋಗ್ಯದಿಂದ ಬಳಲುತ್ತಿರುವುದು ಅತೀವ ನೋವನ್ನುಂಟು ಮಾಡಿದೆ. ಶ್ರೀಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಫೇಸ್‌ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ.