ಕಳಸ-ಕಳಸ ಹೋಬಳಿಯಾದ್ಯಂತ ಮುಂಗಾರು ಚುರುಕು ಗೊಂಡಿದ್ದು,ಗುರುವಾರ ರಾತ್ರಿಯಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಭದ್ರಾ ನದಿ ತುಂಬಿ ಹರಿಯಲಾರಂಬಿಸಿದೆ.
ಕಳಸ ಸೇರಿದಂತೆ ಕುದುರೆಮುಖ,ನೆಲ್ಲಿಬೀಡು,ಜಾಂಬ್ಲೆ,ಸಂಸೆ,ಹೊರನಾಡು,ಬಲಿಗೆ,ಹಿರೇಬೈಲು,ಮರಸಣಿಗೆ,ಬಾಳೆಹೊಳೆ ಮುಂತಾದೆಡೆ ಉತ್ತಮ ಮಳೆಯಾಗಿದೆ.ಇದರಿಂದ ಸುತ್ತಮುತ್ತಲಿನ ಹಳ್ಳ,ತೊರೆ,ಕೆರೆಗಳಲ್ಲಿ ನೀರು ತುಂಬಿದೆ.ಭದ್ರಾ ನದಿಯ ನೀರಿನ ಮಟ್ಟ ಗಣನೀಯವಾಗಿ ಏರಿಕೆ ಕಂಡು ಬಂದಿದೆ.ಕಳೆದ ಎರಡು ವರ್ಷಗಳಿಂದ ಜೂನ್ ತಿಂಗಳಿನಲ್ಲಿ ಮಳೆಯ ಪ್ರಮಾಣ ಕಡಿಮೆ ಇತ್ತು ಆದರೆ ಈ ಬಾರಿ ಜೂನ್ ಪ್ರಾರಂಬದಲ್ಲಿಯೇ ಉತ್ತಮ ಮಳೆಯಾಗಿ ನದಿಗಳು ತುಂಬಿ ಹರಿಯುತ್ತಿದೆ.
ಮಳೆಯಿಂದ ಹೋಬಳಿಯಾದ್ಯಂತ ಹೆಚ್ಚಿನ ರಸ್ತೆಗಳು ಹದೆಗೆಟ್ಟ ಪರಿಣಾಮ ಸಾರ್ವಜನಿಕರು ತೀರ ತೊಂದರೆ ಅನುಭವಿಸುತ್ತಿದ್ದಾರೆ.ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಯ ನಿರ್ವಹಣೆ ಮಾಡದೆ ಇರುವ ಪರಿಣಾಮ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಹೆಚ್ಚಿನ ರಸ್ತೆಗಳು ಹದೆಗೆಡುತ್ತಿವೆ.